ಭಟ್ಕಳ: ಹೆದ್ದಾರಿ ವಿಸ್ತರಣೆಗೆ ತೆರವುಗೊಂಡಿದ್ದ ಮುರಿನಕಟ್ಟೆಯ ಮರುನಿರ್ಮಾಣ ನಗರದಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿದೆ. ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.

‘ಪೊಲೀಸರ ಕಾವಲು ಇದ್ದರೂ ಮುಸ್ಲಿಂ ಯುವಕರ ಗುಂಪು ಕಟ್ಟೆಗೆ ಹಾನಿ ಮಾಡಿದೆ. ಪೊಲೀಸರ ಮೇಲೆಯೂ ಹಲ್ಲೆ ನಡೆಸಲಾಗಿದೆ. ಕ್ರಮ ಜರುಗಿಸಲು ಪೊಲೀಸರು ವಿಫಲರಾಗಿದ್ದಾರೆ’ ಎಂದು ಆರೋಪಿಸಿ ಬಿಜೆಪಿ ಮುಖಂಡ ಗೋವಿಂದ ನಾಯ್ಕ, ಸುನೀಲ ನಾಯ್ಕ, ಶ್ರೀಕಾಂತ ನಾಯ್ಕ ನೇತೃತ್ವದಲ್ಲಿ ಹಿಂದೂ ಜಾಗರಣ ವೇದಿಕೆ, ಇತರ ಸಂಘಟನೆಯ ಕಾರ್ಯಕರ್ತರು ತಡರಾತ್ರಿವರೆಗೂ ಪೊಲೀಸ್ ಠಾಣೆ ಆವರಣದಲ್ಲಿ ಪ್ರತಿಭಟಿಸಿದರು. ಕಟ್ಟೆ ಇದ್ದ ಸ್ಥಳಕ್ಕೆ ತೆರಳಲು ಮುಂದಾಗಿದ್ದ ಅವರನ್ನು ಸಂಶುದ್ದಿನ್ ವೃತ್ತದ ಬಳಿ ಪೊಲೀಸರು ತಡೆದರು. ಕೆಲವರನ್ನು ವಶಕ್ಕೆ ಪಡೆದು, ಬಳಿಕ ಬಿಡುಗಡೆಗೊಳಿಸಿದರು.

ಘಟನೆ ಉದ್ವಿಗ್ನ ಸ್ಥಿತಿಗೆ ತಿರುಗದಂತೆ ಕಟ್ಟೆಚ್ಚರ ವಹಿಸಿದ ಪೊಲೀಸರು ನಗರದಾದ್ಯಂತ ಭದ್ರತೆ ಒದಗಿಸಿದರು. ಮೇ 27ರ ಬೆಳಿಗ್ಗೆ 6 ಗಂಟೆವರೆಗೆ ನಗರ, ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಿ ಉಪವಿಭಾಗಾಧಿಕಾರಿ ಆದೇಶಿಸಿದ್ದಾರೆ.

‘ಮುರಿನಕಟ್ಟೆ ತೆರವಿನ ಘಟನೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಜಿಲ್ಲಾಡಳಿತದ ವೈಫಲ್ಯ ಕಾರಣ. ಘಟನೆ ನಡೆದು 18 ತಾಸು ಕಳೆದರೂ ಸ್ಥಳಕ್ಕೆ ಬರದೆ ಸಚಿವರು ಪಲಾಯನ ಮಾಡಿದ್ದಾರೆ. ಪೊಲೀಸರುನ್ನು ತಳ್ಳಿಕೊಂಡು ಕಟ್ಟೆಗೆ ಹಾನಿ ಮಾಡಿರುವುದು ಕಾಂಗ್ರೆಸ್ನ ಓಲೈಕೆ ರಾಜಕಾರಣಕ್ಕೆ ಸಾಕ್ಷಿಯಾಗಿದೆ’ ಎಂದು ಬಿಜೆಪಿ ಮುಖಂಡ ಗೋವಿಂದ ನಾಯ್ಕ, ಸುನೀಲ ನಾಯ್ಕ ಆರೋಪಿಸಿದರು.

‘ಮುರಿನಕಟ್ಟೆ ಮುಂಚಿದ್ದ ಸ್ಥಳದಲ್ಲಿ ನಿರ್ಮಿಸಲು ವಿರೋಧವಿಲ್ಲ. ಅದನ್ನು ಬಿಟ್ಟು ಈಗ ನಿರ್ಮಿಸಿದ ಸ್ಥಳದಲ್ಲಿ ಒತ್ತಾಯಪೂರ್ವಕವಾಗಿ ನಿರ್ಮಿಸಿದ್ದು ಸರಿಯಲ್ಲ’ ಎಂದು ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಹೇಳಿದರು.

‘ಮುರಿನಕಟ್ಟೆಯನ್ನು ಜಿಲ್ಲಾಡಳಿತದಿಂದಲೇ ಮರುನಿರ್ಮಿಸಲಾಗಿದೆ. ಅದನ್ನು ಕೆಡವಿ ಹಾಕಿರುವವರ ಮೇಲೆ ಕಾನೂನು ಕ್ರಮ ಆಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪ್ರತಿಕ್ರಿಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-20-975371643

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.