ಭಟ್ಕಳ: ಪಟ್ಟಣದಲ್ಲಿ ನನೆಗುದಿಗೆ ಬಿದ್ದಿದ್ದ ಹೆದ್ದಾರಿ ಕಾಮಗಾರಿ ಚುರುಕುಗೊಂಡಿದ್ದು, ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಎದುರು ಗುಡ್ಡ ತೆರವು ಕಾರ್ಯ ವೇಗದಲ್ಲಿ ಸಾಗುತ್ತಿದೆ. ಆದರೆ, ಬೀದಿದೀಪ ಇಲ್ಲದ ಕಾರಣ ರಾತ್ರಿ ಹೊತ್ತು ಈ ಸ್ಥಳ ಅಪಘಾತ ವಲಯವಾಗಿ ಮಾರ್ಪಟ್ಟಿದೆ.

ಹೆದ್ದಾರಿ ವಿಸ್ತರಣೆ ಕಾಮಗಾರಿ ಪೂರ್ವದಲ್ಲಿ ಪಟ್ಟಣದ ಮೂಡಭಟ್ಕಳ, ಮಣ್ಕುಳಿ, ಉಸ್ಮಾನ ನಗರ, ಪಿಎಲ್ಡಿ ಬ್ಯಾಂಕ್ ಕ್ರಾಸ್, ಸಂಶುದ್ದೀನ್ ವೃತ್ತ, ರಂಗಿನಕಟ್ಟೆ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಪುರಸಭೆಯಿಂದ ಹೈಮಾಸ್ಟ್ ಬೀದಿ ದೀಪಗಳನ್ನು ಅಳವಡಿಸಲಾಗಿತ್ತು. ಹೆದ್ದಾರಿ ವಿಸ್ತರಣೆ ಮಾಡುವ ಕಾರಣಕ್ಕೆ ಗುತ್ತಿಗೆ ಕಂಪನಿ ಐಆರ್ಬಿ ಇನ್ಫ್ರಾಸ್ಟ್ರಕ್ಚರ್ ಎರಡು ವರ್ಷದ ಹಿಂದೆ ಬೀದಿದೀಪಗಳನ್ನು ತೆರವುಗೊಳಿಸಿತ್ತು.

‘ಹೆದ್ದಾರಿ ವಿಸ್ತರಣೆಗೆ ತೆರವುಗೊಂಡ ಹೇಮಾಸ್ಟ್ ದೀಪಗಳನ್ನು ಈವರೆಗೂ ಮರು ಅಳವಡಿಕೆ ಮಾಡಿಲ್ಲ. ವಾಹನ ಸವಾರರು ರಾತ್ರಿ ಸಮಯದಲ್ಲಿ ವಾಹನ ಚಲಾಯಿಸಲು ಪರದಾಡುವಂತಾಗಿದೆ’ ಎಂಬುದು ಜನರ ದೂರು.

ಪಟ್ಟಣದ ಮಣ್ಕುಳಿಯಲ್ಲಿ ಪದೇ ಪದೇ ಅಪಘಾತ ಸಂಭವಿಸುವುದನ್ನು ಅರಿತ ಪುರಸಭೆ ಮಣ್ಕುಳಿ ವೃತ್ತದ ಸಮೀಪ ಹೈಮಾಸ್ಟ್ ದೀಪ ಅಳವಡಿಸಿದೆ. ರಸ್ತೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಪಟ್ಟಣದ ಆಯಾಕಟ್ಟಿನಲ್ಲಿ ತಾತ್ಕಾಲಿಕವಾಗಿ ಬೀದಿದೀಪ ಅಳವಡಿಸುವಂತೆ ಕಳೆದ ಕೆಲವು ತಿಂಗಳಗಳ ಹಿಂದೆ ನಡೆದ ಹೆದ್ದಾರಿ ಹೋರಾಟ ಸಮಿತಿ ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಗುತ್ತಿಗೆ ಕಂಪನಿಗೆ ಸೂಚನೆ ನೀಡಿದ್ದರು. ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.

‘ಮೂಡಭಟ್ಕಳ ಬೈಪಾಸ್ನಿಂದ ತೆಂಗಿನಗುಂಡಿ ಕ್ರಾಸ್ವರೆಗೆ ಬೀದಿದೀಪ ಕಂಬಗಳನ್ನು ತೆರವು ಮಾಡಿ ಎರಡು ವರ್ಷಗಳೆ ಕಳೆದಿವೆ. ಹೆದ್ದಾರಿಯೆ ಬೀದಿ ವ್ಯಾಪಾರಿಗಳ ವ್ಯಾಪಾರ ಕೇಂದ್ರವಾಗಿದೆ. ಬೀದಿ ದೀಪ ಇಲ್ಲದ ಕಾರಣ ರಾತ್ರಿ ಹೊತ್ತು ಇಲ್ಲಿ ಖರೀದಿಗಾಗಿ ಆ ಕಡೆಯಿಂದ ಈ ಕಡೆಗೆ ತೀರುಗಾಡುವರಿಗೆ, ಸ್ಥಳೀಯ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ತಾತ್ಕಾಲಿಕವಾಗಿ ಬೀದಿದೀಪಗಳನ್ನು ಅಳವಡಿಸುವಂತೆ ಐಆರ್ಬಿ ಇನ್ಫ್ರಾಸ್ಟ್ರಕ್ಚರ್ ಕಂಪನಿಯವರಿಗೆ, ತಾಲ್ಲೂಕು ಆಡಳಿತಕ್ಕೆ ಹಲವಾರು ಬಾರಿ ಮನವಿ ಮಾಡಿದರೂ ಇನ್ನೂ ಕ್ರಮಕ್ಕೆ ಮುಂದಾಗಿಲ್ಲ’ ಎನ್ನುತ್ತಾರೆ ಭಟ್ಕಳ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷರಾದ ಸತೀಶ ಕುಮಾರ ನಾಯ್ಕ.

ಪಟ್ಟಣದ ಕೆಲವು ಪ್ರದೇಶಗಳಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಲು ಸ್ಥಳಾವಕಾಶದ ಕೊರತೆ ಹಾಗೂ ವಿದ್ಯುತ್ ಲೈನ್ ಸಂಪರ್ಕ ಇಲ್ಲದಿರುವುದು ಸಮಸ್ಯೆಯಾಗಿದೆ
ವೆಂಕಟೇಶ ನಾವುಡ, ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.