ಭಟ್ಕಳ: ಪಟ್ಟಣದ ಹನುಮಾನ ನಗರದ ಶಾಲೆ ಕ್ರೀಡಾಂಗಣವನ್ನು ಕ್ರಿಕೆಟ್ ಮತ್ತಿತರ ಚಟುವಟಿಕೆಗಳಿಗೆ ಬಳಸಿಕೊಳ್ಳುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುರುವಾರ ಆಸರಕೇರಿಯ ವೆಂಕಟೇಶ್ವರ ಅಭಿವೃದ್ಧಿ ಸಂಘದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ.

ಹನುಮಾನ ನಗರದ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣವನ್ನು ಕೆಲವರು ಕ್ರಿಕೆಟ್ ಮೈದಾನವನ್ನಾಗಿ ಮಾಡಿಕೊಂಡು ಅಕ್ಕಪಕ್ಕದ ಊರಿನವರಿಂದ ಹಣ ವಸೂಲಿ ಮಾಡಿ ಅವರಿಗೆ ಕ್ರಿಕೆಟ್ ಆಡಲು ಅವಕಾಶ ಮಾಡಿಕೊಡುತ್ತಿದ್ದಾರೆ. ಆಸರಕೇರಿ ಗ್ರಾಮದವರು ಇತ್ತೀಚೆಗೆ ಕ್ರಿಕೆಟ್ ಆಡಲು ಅನುಮತಿ ಕೇಳಲು ಹೋದಾಗ ದುಬಾರಿ ಹಣದ ಬೇಡಿಕೆ ಇಟ್ಟಿದ್ದಾರೆ. ಮೈದಾನ ನೀಡುವುದಿಲ್ಲ, ಒಂದು ವೇಳೆ ಆಟವಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಶಾಲೆ ಮೈದಾನವನ್ನು ಕಾನೂನು ಬಾಹಿರವಾಗಿ ಕ್ರಿಕೆಟ್ ಮೈದಾನ ಮಾಡಿಕೊಂಡಿರುವುದಲ್ಲದೇ ಬೇರೆಯವರಿಗೆ ಆಟ ಆಡಲು ಅಡ್ಡಿ ಪಡಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದರು.

ಶಾಲೆ ಪರಿಸರದ ಸುರಕ್ಷತೆ ದೃಷ್ಟಿಯಿಂದ ಮೈದಾನ ಪರಿಶೀಲಿಸಿ ಶಾಲೆಗೆ ಸಂಬಂಧಿಸಿದ ಕ್ರೀಡೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆಗೆ ಮೈದಾನ ಬಳಸಲು ನೀಡಬಾರದು. ಶಾಲೆ ಮೈದಾನದಲ್ಲಿ ಶಾಶ್ವತವಾಗಿ ನಿರ್ಮಿಸಿಕೊಂಡ ಕ್ರಿಕೆಟ್ ಅಂಕಣವನ್ನು ತೆಗೆದು ಹಾಕಿ ಶಾಲೆ ಮಕ್ಕಳಿಗೆ ಮೈದಾನದಲ್ಲಿ ಆಟವಾಡಲು ಅವಕಾಶ ನೀಡಬೇಕು. ಶಾಲೆ ಪರಿಕರಗಳ ಜೊತೆಗೆ ಶಾಲಾ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಶಾಲಾಭಿವೃದ್ಧಿ ಸಮಿತಿ ಮತ್ತು ಮುಖ್ಯಶಿಕ್ಷಕರಿಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.

ಆಸರಕೇರಿಯ ವೆಂಕಟೇಶ್ವರ ಅಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.