ಭಟ್ಕಳ: ಜಾಲಿ ಪಟ್ಟಣದ ದೇವಿನಗರದಲ್ಲಿ ಗುರುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ ಇಬ್ಬರು ಯುವಕರಿಗೆ ಚೂರಿ ಇರಿಯಲಾಗಿದೆ.

‘ವಾಹನದ ಹಾರ್ನ್ ಮಾಡಿದ್ದಕ್ಕೆ ತಗಾದೆ ತೆಗೆದು ಜಾಲಿ ದೇವಿನಗರ ನಿವಾಸಿ ಮಹ್ಮದ್ ತಾಹೀರ್, ಭಟ್ಕಳ ನಿವಾಸಿ ಕೈಫ್ ಕುಟ್ಟಿ, ಜಾಮಿಯಾಬಾದ್ ನಿವಾಸಿ ಯಾಸೀನ್ ಪಾಷಾ, ಮೂಸಾನಗರ ನಿವಾಸಿ ಮಹ್ಮದ್ ಮೌಲಾ ಮತ್ತು ಮುಸ್ತಾಕ್, ಮಹ್ಮದ್ ಖಾಸೀಂ ಸೇರಿದಂತೆ ಇತರರು ಗುಂಪಾಗಿ ಮಹ್ಮದ್ ಫಾಹೀಸ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ಜತೆಗಿದ್ದ ತೌಸೀಪ್ ಖತೀಬ್ ಹಾಗೂ ಮಹ್ಮದ್ ಜುಪಾಪ್ ಆರ್ಮರ್ ಅವರಿಗೆ ಚೂರಿಯಿಂದ ಇರಿದಿದ್ದಾರೆ. ಅಲ್ಲದೆ, ಘಟನೆಯಲ್ಲಿ ₹20 ಲಕ್ಷ ಮೌಲ್ಯದ ಕೈಗಡಿಯಾರ, ನಗದು ಕಳೆದಿದೆ’ ಎಂದು ಜಾಲಿ ರಸ್ತೆ ನಿವಾಸಿ ಸಯ್ಯದ್ ಮಹ್ಮದ್ ಫಾಹೀಸ್ ದೂರು ನೀಡಿದ್ದಾರೆ. ‘ಹಲ್ಲೆ ಘಟನೆ ನಡೆದಿದ್ದರಿಂದ ಸ್ಥಳದಲ್ಲಿ ನೂರಾರು ಜನರು ಗುಂಪುಗೂಡಿದ್ದರಿಂದ ಕೆಲ ಹೊತ್ತು ಉದ್ವಿಗ್ನ ಸ್ಥಿತಿ ಉಂಟಾಗಿತ್ತು. ಬಳಿಕ ಪರಿಸ್ಥಿತಿ ತಿಳಿಯಾಗಿದೆ. ಮೂವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-20-128649537

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.