ಭಟ್ಕಳ: ತಾಲ್ಲೂಕಿನ ಅಳ್ವೆಕೊಡಿಯ ಕಳ್ಳಿಕಟ್ಟೆ ನದಿಯಲ್ಲಿ ಸಾವಿಗಿಡಾದ 11 ಸಂತ್ರಸ್ತರ ಮನೆಗಳಿಗೆ ಶಿರಸಿ ಶಾಸಕ ಭೀಮಣ್ಣ ನಾಯ್ಕ ಸೋಮವಾರ ಭೇಟಿ ನೀಡಿ ಸಾಂತ್ವನ ಹೇಳಿದರು.

ಮೃತ ಲಕ್ಷ್ಮಿ ನಾಯ್ಕ ಮನೆಯ ಜಗಲಿಯಲ್ಲಿ ಅಸಹಾಯಕರಾಗಿ ಮನೆಯ ಚಾವಣಿ ನೋಡುತ್ತ ಕಣ್ಣೀರು ಇಡುತ್ತಾ ಕುಳಿತಿದ್ದ ಮೂವರು ಹೆಣ್ಣು ಮಕ್ಕಳಿಗೆ ಹಾಗೂ ಗಂಡು ಮಗುವಿಗೆ ಧೈರ್ಯ ತುಂಬಿದರು.

‘ಸರ್ಕಾರದಿಂದ ಸಿಗುವ ಸಹಾಯಗಳ ಬಗ್ಗೆ ಈಗಾಗಲೇ ಸಚಿವ ಮಾಂಕಾಳ ವೈದ್ಯ ಕಾರ್ಯೊನ್ಮುಖರಾಗಿದ್ದು ಇನ್ನಷ್ಟು ಸಹಾಯವನ್ನು ದೊರಕಿಸುವ ನಿಟ್ಟಿನಲ್ಲಿ ಸರ್ಕಾರದ ಗಮನಕ್ಕೂ ತರಲಾಗುವುದು’ ಎಂದು ಭರವಸೆ ನೀಡಿದರು.

ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಶಾರದಹೊಳೆ ವೆಂಕಟರಮಣ ದೇವಸ್ಥಾನದ ಪ್ರಮುಖರಾದ ಕೃಷ್ಣ ನಾಯ್ಕ, ಸುಬ್ರಾಯ ನಾಯ್ಕ, ರತ್ನಾಕರ ನಾಯ್ಕ, ಎಂ.ಎನ್ ಸುಬ್ರಹ್ಮಣ್ಯ, ಗೌರೀಶ ನಾಯ್ಕ, ಗಣಪತಿ ನಾಯ್ಕ ಶಾರದಹೊಳೆ, ಕುಮಾರ ನಾಯ್ಕ, ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-20-1988583762

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.