ಭಟ್ಕಳ: ಮಂಗಳಾ ಎಕ್ಸಪ್ರೆಸ್ ರೈಲಿನಲ್ಲಿ ಹೋಗುತ್ತಿದ್ದ ಮುರ್ಡೇಶ್ವರದ ವ್ಯಕ್ತಿಯೊಬ್ಬರಿಗೆ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮುರ್ಡೇಶ್ವರದ ಇಬ್ಬರು ವಂಚಕರು ಮತ್ತು ಬರಿಸುವ ಲಡ್ಡು ತಿನ್ನಿಸಿ ₹ 4.75 ಲಕ್ಷ ದೋಚಿ ಪರಾರಿಯಾಗಿದ್ದಾರೆ.

ಮುರ್ಡೇಶ್ವರ ನ್ಯಾಶನಲ್ ಕಾಲೊನಿಯ ಮಹಮ್ಮದ್ ಖಾಸಿಂ ಹಸನ್ ಸಾಬ್ ಅವರು ಭಟ್ಕಳದಿಂದ ದೆಹಲಿಗೆ ಹೋಗುವ ಮಂಗಳಾ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮುರ್ಡೇಶ್ವರದವರೇ ಆದ ತಹಸೀನ್ ಬಾವಾ ಅಮೀರ್ ಮಂಕಿಕರ್ ಎನ್ನುವ ಮಹಿಳೆ ಹಾಗೂ ಶೇಖ್ ರಿಯಾಜ್ ಗಿಡ್ಡನ್ನಣನವರ್ ಎಂಬ ಹೆಸರಿನಿಂದ ಪರಿಚಯಿಸಿಕೊಂಡ ಇಬ್ಬರು ತಿನ್ನಲು ಲಡ್ಡು ನೀಡಿದರು. ಬೇಡ ಎಂದರೂ ಒತ್ತಾಯ ಪೂರ್ವಕವಾಗಿ ತಿನ್ನಿಸಿದರು. ಲಡ್ಡು ತಿಂದ ಮಹಮ್ಮದ್ ಖಾಸಿಂ ನಿದ್ದೆಗೆ ಜಾರಿದರು. ಈ ಸಂದರ್ಭದಲ್ಲಿ ವಂಚಕರು ಅವರಲ್ಲಿದ್ದ ₹ 4.75 ಲಕ್ಷ ನಗದು ದೋಚಿ ಪರಾರಿಯಾದರು. ಅವರು ಕಾರವಾರದಲ್ಲಿ ರೈಲಿನಿಂದ ಇಳಿದಿರುವುದಾಗಿ ತಿಳಿದುಬಂದಿದೆ. ಅವರು ಭಾನುವಾರ ಭಟ್ಕಳ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-20-407007060

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.