ಭಟ್ಕಳ: ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ಭಟ್ಕಳ ಪಟ್ಟಣದ ವಡೇರ ಮಠದಲ್ಲಿ ಜೂನ್ 1ರಿಂದ ಜೂನ್ 12ರವರೆಗೆ ವಾಸ್ತವ್ಯ ಮಾಡಲಿದ್ದಾರೆ ಎಂದು ಮಂಜುನಾಥ ಪ್ರಭು ಹೇಳಿದರು.

ಪಟ್ಟಣದ ವಡೇರ ಮಠದಲ್ಲಿ ಭಾನುವಾರ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.

‘ಭಟ್ಕಳದ ವಡೇರ ಮಠವೂ ಗೋಕರ್ಣ ಪರ್ತಗಾಳಿ ಮಠದ ಮೂಲಮಠವಾಗಿದ್ದು 550 ಸಂವತ್ಸರಗಳನ್ನು ಪೊರೈಸುತ್ತಿರುವ ಹಿನ್ನೆಲೆ ಹಾಗೂ ಅಧಿಕ ಮಾಸದ ವಿಶೇಷ ಸಂದರ್ಭದಲ್ಲಿ ಶ್ರೀಗಳು ಬರಲಿದ್ದು, ಜೂನ್ 1ರಂದು ಸಂಜೆ 7 ಗಂಟೆಗೆ ಗುರುಗಳ ಆಗಮನ, ಆಶೀರ್ವಚನ, ಮಠದ ದೇವರ ಪೂಜೆ ಬಳಿಕ ಪ್ರಸಾದ ಭೋಜನ ನಡೆಯಲಿದೆ’ ಎಂದರು.

ಜೂನ್ 1ರಿಂದ 12ರವರೆಗೆ ನಿತ್ಯ ಬೆಳಿಗ್ಗೆ 7 ಗಂಟೆಗೆ ಸುಪ್ರಭಾತ, ನೈರ್ಮಲ್ಯ ವಿಸರ್ಜನೆ, ಏಕಾದಶಿ ಹೊರತುಪಡಿಸಿ ಸಂಸ್ಥಾನ ದೇವರಲ್ಲಿ ಅಪೂಪದಾನ ಹಾಗೂ ದೀಪ ದಾನ ಸೇವೆ ಕೃಷ್ಣಾರ್ಪಣೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ತೀರ್ಥ ಪ್ರಸಾದ ಹಾಗೂ ಸಂಜೆ ಭಜನೆ, ಧಾರ್ಮಿಕ ಸಭೆಗಳು ನಡೆಯಲಿವೆ ಎಂದು ತಿಳಿಸಿದರು.

ಅಧಿಕ ಮಾಸದ ಅಂಗವಾಗಿ ವೇ.ಮೂ.ರಾಮಕೃಷ್ಣ ಭಟ್ ಬೆಂಗಳೂರು ಇವರಿಂದ ಜೂ.2ರಿಂದ 8ರವರೆಗೆ ಸಂಜೆ 7ರಿಂದ ಭಾಗವತ ಪ್ರವಚನ, ಜೂನ್ 5ರಂದು ಬೆಳಿಗ್ಗೆ 9 ಗಂಟೆಗೆ ಮಹಿಳಾ ಮಂಡಳದ ವತಿಯಿಂದ ಲಕ್ಷ ಕುಂಕುಮಾರ್ಚನೆ, ಪರಿಸರ ದಿನಾಚರಣೆ ಅಂಗವಾಗಿ ಶ್ರೀಗಳಿಂದ ಸಮಾಜದವರಿಂದ ಸಸಿ ವಿತರಣೆ ನಡೆಯಲಿದೆ.

ಜೂನ್ 6ರಂದು ಗೋಪಾಲಕೃಷ್ಣ ದೇವರಿಗೆ ಶ್ರೀಗಳಿಂದ ಶತಕಲಶಾಭಿಷೇಕ, ಜೂನ್ 7ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆವರೆಗೆ ರಾಘವೇಂದ್ರ ಮಠದ ಆವರಣದಲ್ಲಿ ರಕ್ತದಾನ ಶಿಬಿರ, ಜೂನ್ 9ರಂದು ಬೆಳಿಗ್ಗೆ 9 ಗಂಟೆಗೆ ಲಕ್ಷ ಪ್ರದಕ್ಷಿಣೆ ಸಂಪನ್ನ ಪುರುಷೊತ್ತಮ ಪೂಜೆ, ಬ್ರಾಹ್ಮಣ ಪೂಜೆ, ಜೂನ್ 10ರಂದು ಬೆಳಿಗ್ಗೆ 9 ಗಂಟೆಗೆ ಲಕ್ಷ ತುಳಸಿ ಅರ್ಚನೆ, ಜೂನ್ 11ರಂದು ಬೆಳಿಗ್ಗೆ 8ಗಂಟೆಗೆ ಶ್ರೀಗಳಿಂದ ಏಕಾದಶಿ ಅಖಂಡ ಭಜನೆಯ ದೀಪ ಪ್ರಜ್ವಲನೆ, ಜೂನ್ 12ರಂದು ಬೆಳಿಗ್ಗೆ 8 ಗಂಟೆಗೆ ದೀಪ ವಿಸರ್ಜನೆ, ಮಧ್ಯಾಹ್ನ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ಸಂಜೆ ಆಶೀರ್ವಚನದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.

ಜಿಎಸ್ಬಿ ಸಮಾಜದ ಅಧ್ಯಕ್ಷ ನಾಗೇಶ ಕಾಮತ, ಗಣಪತಿ ಪ್ರಭು, ಗಣಪತಿ ಪುತ್ತು ಪ್ರಭು, ರಾಜೇಶ ಕಾಮತ, ಅಚ್ಯುತ್ ಕಾಮತ, ಪ್ರಕಾಶ ಪ್ರಭು, ಕಲ್ಪೇಶ ಪೈ, ಉದಯ ಪೈ, ಹಾಗೂ ಕಿರಣ ಶ್ಯಾನಭಾಗ ಜಿಎಸ್ಬಿ ಮಹಿಳಾ ಮಂಡಳಿ ಅಧ್ಯಕ್ಷ ಸುನೀತಾ ಪೈ, ರಜನಿ ಪ್ರಭು ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-20-305412604

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.