ಭಟ್ಕಳ: ಪಟ್ಟಣದ ರಂಗೀಕಟ್ಟೆಯಲ್ಲಿನ ಅಶ್ವತ್ಥ ಮರ ಇದ್ದ ಜಾಗದಲ್ಲಿ ನಗರಸಭೆಯ ನೀರಿನ ಪೈಪ್ಲೈನ್ ಒಡೆದು ಕಳೆದ ಒಂದು ವಾರದಿಂದ ಲಕ್ಷಾಂತರ ಲೀಟರ್ ನೀರು ಪ್ರತಿ ದಿನ ಪೋಲಾಗುತ್ತಿದೆ. ಆದರೆ ನಗರಸಭೆಯ ಅಧಿಕಾರಿಗಳು ಇದನ್ನು ನೋಡಿಯೂ ನೋಡದಂತೆ ಸುಮ್ಮನಿದ್ದಾರೆ.

ಒಂದು ತಿಂಗಳಿನಿಂದ ಸುಡುತ್ತಿರುವ ಉರಿ ಬಿಸಿಲಿನಿಂದಾಗಿ ನೀರಿನ ಸರಬರಾಜು ಮಾಡುವ ಕಡವಿನಕಟ್ಟಾ ಡ್ಯಾಂ ಒಣಗುತ್ತಿದೆ. ಇನ್ನೇನು ಕೆಲವೇ ಸಮಯದಲ್ಲಿ ಖಾಲಿಯಾಗುವ ಹಂತಕ್ಕೆ ತಲುಪುತ್ತದೆ. ಇಂತಹ ಸಮಯದಲ್ಲಿ ಲಕ್ಷಾಂತರ ಲೀಟರ್ ನೀರು ಪೋಲಾಗುತ್ತಿರುವುದು ಜನರಲ್ಲಿ ಆಕ್ರೋಶ ಮೂಡಿಸಿದೆ.

ಹೆದ್ದಾರಿ ಗುತ್ತಿಗೆದಾರ ಐ.ಆರ್.ಬಿ ಕಂಪೆನಿ ನಿತ್ಯ ಜೆ.ಸಿ.ಬಿ. ಬಳಸಿ ಸಾವಿರಾರು ಲೀಟರ್ ನೀರನ್ನು ತೆಗೆದು ಹೊರ ಹಾಕಿ ಕಾಮಗಾರಿ ಮಾಡುತ್ತಿದೆ. ನೂರಾರು ಲೀಟರ್ ಡೀಸಲ್ ಬಳಸುವ ಇವರು ಒಡೆದ ಪೈಪ್ ದುರಸ್ತಿಗೆ ಮುಂದಾಗುತ್ತಿಲ್ಲ. ಇತ್ತ ನಗರಸಭೆಯವರೂ ಸುಮ್ಮನೆ ಕುಳಿತಿದ್ದಾರೆ.

‘ಹೆದ್ದಾರಿ ಕಾಮಗಾರಿಯನ್ನು ಮಾಡುವ ಪೂರ್ವದಲ್ಲಿ ನೀರಿನ ಪೈಪ್ ಮತ್ತು ಒಳಚರಂಡಿ ಪೈಪುಗಳನ್ನು ಬೇರೆಡೆ ಸ್ಥಳಾಂತರಿಸಿ ಕಾಮಗಾರಿ ಮಾಡುವಂತೆ ಈಗಾಗಲೇ ಹೆದ್ದಾರಿ ಇಲಾಖೆಗೆ ಪತ್ರ ಬರೆದಿದ್ದೇವೆ. ಆದರೂ ಸ್ಥಳಾಂತರಿಸಿಲ್ಲ. ಕನಿಷ್ಠ ಒಡೆದು ಹೋದ ಪೈಪ್ ಜೋಡಣೆಗೆ ಅಗತ್ಯ ಸಾಮಗ್ರಿಗಳನ್ನೂ ನಗರಸಭೆಗೆ ಕೊಡುತ್ತಿಲ್ಲ’ ಎಂದು ನಗರಸಭೆಯ ಎಂಜಿನಿಯರ್ ಅರವಿಂದ್ ರಾವ್ ಪ್ರತಿಕ್ರಿಯೆ ನೀಡಿದರು.

ಐ.ಆರ್.ಬಿ ಹಾಗೂ ನಗರಸಭೆಯವರು ಒಬ್ಬರನ್ನೊಬ್ಬರು ದೂರುತ್ತ ಕುಳಿತರೆ ದುರಸ್ತಿ ಮಾಡಿಸುವವರು ಯಾರು ಎಂದು ಪ್ರಶ್ನಿಸಿರುವ ಸ್ಥಳೀಯರಾದ ದೀಪಕ ನಾಯ್ಕ , ತಾಲ್ಲೂಕು ಆಡಳಿತ ತಕ್ಷಣ ನೀರಿನ ಪೈಪ್ ಅನ್ನು ದುರಸ್ತಿ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-20-709247138

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.