ಭಟ್ಕಳ: ಯೋಗ ಗುರು ಭವರಲಾಲ್ ಆರ್ಯ ಅವರ ಮಾರ್ಗದರ್ಶನದಲ್ಲಿ ಭಟ್ಕಳದ ಯೋಗ ಗುರು ಗೋವಿಂದ್ ದೇವಡಿಗ ಅವರ ನಾಯಕತ್ವದಲ್ಲಿ ಪಟ್ಟಣದ ಮಣಕುಳಿಯ ನಾಗಮಸ್ತಿ ಕ್ಷೇತ್ರದಲ್ಲಿ ಅಡ್ವಾನ್ಸ್ ಯೋಗ ಶಿಕ್ಷಕರ 23 ದಿನಗಳ ತರಬೇತಿ ಶಿಬಿರ ಭಾನುವಾರ ಮುಂಂಜಾನೆ ತುಳಸಿ ಗಿಡಕ್ಕೆ ನೀರೆಯುವ ಮೂಲಕ ಚಾಲನೆ ನೀಡಲಾಯಿತು.

ಪತಂಜಲಿ ಕಿಸಾನ್ ಸಂಘಟನೆಯ ರಾಜ್ಯ ಪ್ರಭಾರಿ ಸಂಜಯ್ ಗುತ್ತೇದಾರ್ ಯೋಗಕ್ಕೆ ಚಾಲನೆ ನೀಡಿದರು.

ಭಟ್ಕಳ ಡಿವೈಎಸ್ಪಿ ಎಂ ಗಿರೀಶ್ ಮಾತನಾಡಿ, ಯೋಗದಿಂದ ರೋಗ ಮುಕ್ತಿ. ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಯೋಗ ಪ್ರತಿ ವ್ಯಕ್ತಿಗಳಿಗೂ ಅತ್ಯಗತ್ಯ. ಚಿಕ್ಕವರಿಂದ ವಯೋವೃದ್ದರವರಿಗೆ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳುವುದರ ಮೂಲಕ ಸ್ವಸ್ಥ ಹಾಗೂ ಸ್ವಚ್ಛ ಜೀವನವನ್ನು ನಡೆಸಲಿಕ್ಕೆ ಸಾಧ್ಯ. ಯೋಗದಲ್ಲಿ ಇಂದು ಜಗತ್ತಿನ ವಿವಿಧ ದೇಶಗಳಿಗೆ ಭಾರತ ದೇಶವೇ ಮಾದರಿಯಾಗಿದೆ ಎಂದರು.

ಉದ್ಯಮಿ ಹಾಗೂ ಭಟ್ಕಳ ಎಜುಕೇಶನ್ ಟ್ರಸ್ಟಿ ನಾಗೇಶ್ ಭಟ್ ಮಾತನಾಡಿ ಯೋಗನ್ನು ಅಳವಡಿಸಿಕೊಂಡವರು ನಿರೋಗಿಗಳಾಗಿ ರುತ್ತಾರೆ. ಯೋಗ ವ್ಯಕ್ತಿಗತ ಆರೋಗ್ಯದೊಂದಿಗೆ ಸಮಾಜದ ಸ್ವಾಸ್ಥ್ಯಕ್ಕೂ ಕಾರಣವಾಗುವುದು. ಜಗತ್ತು ಯೋಗದಿಂದಾಗಿ ಭಾರತವನ್ನ ವಿಶ್ವಗುರು ಎಂದು ಒಪ್ಪಿಕೊಂಡಿದೆ. ಯೋಗದ ಮಹತ್ವವನ್ನ ಮುಂದುವರಿದ ದೇಶಗಳು ಅರಿತುಕೊಂಡು ಅಳವಡಿಸಿಕೊಳ್ಳುತ್ತಿದೆ ಎಂದರು.

ನಾಗ ಮಾಸ್ತಿ ಕ್ಷೇತ್ರದ ಅಧ್ಯಕ್ಷ ಸತೀಶಕುಮಾರ್ ಮಾತನಾಡಿ, ಯೋಗದ ಮಹತ್ವದ ಕುರಿತು ವಿವರಿಸಿದರು. ಭಟ್ಕಳದಲ್ಲಿ ಯೋಗ ತರಬೇತಿಗಾಗಿ ಕೆಲವು ದಶಕಗಳ ಕಾಲ ಶ್ರಮಿಸಿದ ಹಿರಿಯ ಯೋಗ ಪಟುಗಳಾದ ವಿಠಲ ಬಾಳೆರಿಯವರನ್ನ ಸನ್ಮಾನಿಸಲಾಯಿತು.

ಗೋವಿಂದ್ ಗುರೂಜಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ರಾಜ್ಯ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಶ್ರೀನಾಥ್ ಗೌಡ, ಪತಂಜಲಿ ಜಿಲ್ಲಾ ಪ್ರಭಾವಿ ರಘುರಾಮ್ ಹೆಗಡೆ, ರಾಜ್ಯ ಪತಂಜಲಿ ಸದಸ್ಯರಾದ ನಾಗೇಂದ್ರ ಭಟ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-20-312614907

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.