ದಾಂಡೇಲಿ: ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅರೆ ಗಾಳಿ, ಗಣೇಶಗುಡಿ ಹಾಗೂ ಇತರ ಭಾಗಗಳಲ್ಲಿ ಬೈಕ್ ಸವಾರರು ವ್ಹೀಲಿಂಗ್ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಕಂಡು ಸೋಮವಾರ ಕಾರ್ಯಾಚರಣೆಗೆ ಇಳಿದ ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸರು ವ್ಹೀಲಿಂಗ್ ನಡೆಸುತ್ತಿದ್ದ ಬೈಕ್ ಮಾಲೀಕರನ್ನು ಕರೆಸಿ ಎಚ್ಚರಿಕೆ ನೀಡಿದರು.