ಕುಮಟಾ: `ಗ್ರಾಮೀಣ ಭಾಗದ ಶಾಲೆಯಲ್ಲಿ ಶಿಕ್ಷಕರಾಗಿ ಹಾಗೂ ಸ್ಕೌಟ್ಸ್ ನಂತಹ ಶಿಸ್ತುಬದ್ಧ ಸಂಘಟನೆಯ ನೇತೃತ್ವ ವಹಿಸಿ ವಿದೇಶಗಳಿಗೆ ತೆರಳಿ ಸೇವೆ ಸಲ್ಲಿಸಿದ ಅನುಭವ ರಾಜು ನಾಯ್ಕ ಅವರಲ್ಲಿದೆ. ಈ ದಟ್ಟ ಅನುಭವದಿಂದ ವಿಶಿಷ್ಟ ಕವಿತ್ವ ಹೊರ ಹೊಮ್ಮಲು ಕಾರಣವಾಗಿದೆ' ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ರೋಹಿದಾಸ ನಾಯಕ ಹೇಳಿದರು.

ತಾಲ್ಲೂಕಿನ ಮಿರ್ಜಾನ ಪ್ರೌಢಶಾಲೆಯಲ್ಲಿ ನಿವೃತ್ತ ಶಿಕ್ಷಕ ರಾಜು ನಾಯ್ಕ ಅವರ `ಹೊಗೆ' ಕವನ ಸಂಕಲನ ಈಚೆಗೆ ಬಿಡುಗಡೆಗೊಳಿಸಿ ಮಾತನಾಡಿದರು.

‘ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಪಿ.ಆರ್. ನಾಯ್ಕ, ` ಹೊಸ ತಲೆಮಾರಿನ ಓದುಗರು ಹಾಗೂ ಬರಹಗಾರರನ್ನು ರಾಜು ನಾಯ್ಕ ಕವಿತೆಗಳು ಪ್ರಭಾವಿಸುವ ಸಾಮರ್ಥ್ಯ ಹೊಂದಿವೆೆ' ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಎನ್.ಆರ್. ಗಜು, ` ಓದು ಮಾಯವಾಗುತ್ತಿರುವ ಇಂದಿನ ದಿನದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಆಸಕ್ತರು ಸಂಭ್ರಮಿಸುತ್ತಿರುವುದು ಮೆಚ್ಚುಗೆಯ ಬೆಳವಣಿಗೆ' ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಅಧ್ಯಕ್ಷ ಪ್ರಮೋದ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕವಿ ರಾಜು ನಾಯ್ಕ ಕವಿತೆ ರಚನೆಗೆ ತಾವು ಒಳಗಾದ ಪ್ರೇರಣೆಯ ಬಗ್ಗೆ ಅನಿಸಿಕೆ ಹಂಚಿಕೊಂಡರು.

ಶಾಲೆಯ ಮುಖ್ಯ ಶಿಕ್ಷಕಿ ಉಮಾ ಹೆಗಡೆ, ಶಿಕ್ಷಕರಾದ ವಿಷ್ಣು ಹೆಬ್ಬಾರ, ಕಲ್ಪನಾ ನಾಯಕ,ವಿಜಕುಮಾರ ನಾಯಕ, ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಕೃಷ್ಣ ಮಾಲಿಗದ್ದೆ, ಸಾಹಿತಿ ಸಾತು ಗೌಡ, ಶಾಲಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ ಗುನಗ, ಜಿ.ಆರ್. ಮಡಿವಾಳ. ಸೌಮ್ಯಾ ಕೊಡಿಯಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.