ಹಳಿಯಾಳ: ಕಳೆದ ನಾಲ್ಕು ದಿನಗಳ ನಿರಂತರ ಮಳೆಯಿಂದ ತಾಲ್ಲೂಕಿನಾದ್ಯಂತ ಸುಮಾರು 26 ಮನೆಗಳ ಗೋಡೆ ಚಾವಣಿ ಕುಸಿದು ಬಿದ್ದು ಅಂದಾಜು ₹12 ಲಕ್ಷಕ್ಕೂ ಮಿಕ್ಕಿ ಹಾನಿಯಾಗಿರುತ್ತದೆ. ಇವುಗಳಲ್ಲಿ ಪೂರ್ಣ ಪ್ರಮಾಣದ 4 ಮನೆಗಳು, ಭಾಗಶಃ 18 ಮನೆಗಳು ಹಾಗೂ ವಾಸ್ತವ್ಯ ಇಲ್ಲದೇ ಇರುವಂತಹ 4 ಮನೆಗಳ ಗೋಡೆಗಳು ಬಿದ್ದು ಹಾನಿಯಾಗಿದೆ .
ಗುರುವಾರ ತಾಲ್ಲೂಕಿನ ಅಜಗಾಂವ ಗ್ರಾಮದ ಜೀಜಾಬಾಯಿ ತುಕಾರಾಮ ಗೋಡೊಳಕರ ಅವರ ಮನೆ ಚಾವಣಿ ಗೋಡೆ ಕುಸಿದು ಬಿದ್ದು ಸುಮಾರು ₹ 1 ಲಕ್ಷಕ್ಕೂ ಮಿಕ್ಕಿ ಹಾನಿಯಾಗಿದೆ.
ನಾಗಶೆಟ್ಟಿ ಕೊಪ್ಪ ಗ್ರಾಮದ ಸುಮಿತ್ರಾ ಪ್ರಕಾಶ ಕಮ್ಮಾರ, ಫ್ರಾನ್ಸಿಸ್ ಪಾಸ್ಕೋ ಹಂಚಿನಮನಿ ರವರಿಗೆ ಸಂಬಂಧಿಸಿದ ಮನೆ ಗೋಡೆ ಹಾಗೂ ಚಾವಣಿ ಕುಸಿದು ಬಿದ್ದು ಹಾನಿಯಾಗಿದೆ. ಆಯಾ ಹೋಬಳಿ ಮಟ್ಟದ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ,ಕಂದಾಯ ನೀರಿಕ್ಷಕರು, ಅಧಿಕಾರಿಗಳು ನಿರಂತರ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ತೆರಳಿ ಪರಿಶೀಲಿಸಿರುತ್ತಾರೆ.
ಈಗಾಗಲೇ ಆರು ಮನೆಯ ಭಾಗಶ: ಹಾನಿ ಗೀಡಾದ ಮನೆಯ ಗೋಡೆಗೆ ತುರ್ತು ಪರಿಹಾರವಾಗಿ ತಲಾ ₹ 4ಸಾವಿರ ವಿತರಣೆ ಮಾಡಲಾಗಿದೆ. ಇನ್ನಿತರ ಹಾನಿಗೀಡಾದ ಮನೆಗಳ ಪರಿಹಾರ ಪರಶೀಲನೆ ಕಂದಾಯ ಇಲಾಖೆಯಿಂದ ನಡೆಯುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.