ದಾಂಡೇಲಿ: ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡ ಕಾರಣಕ್ಕೆ ತಾಲ್ಲೂಕಿನ ರೆಸಾರ್ಟ್ ಹಾಗೂ ಹೋಂ ಸ್ಟೇಗಳಿಗೆ ಸಮಸ್ಯೆ ಎದುರಾಗಿದೆ.

ಸಿಲಿಂಡರ್ ಕೊರತೆಯಿಂದ ರೆಸಾರ್ಟ್ಗಳಲ್ಲಿ ವಾಸ್ತವ್ಯ ಹೂಡಿರುವ ಅತಿಥಿಗಳಿಗೆ ಊಟೋಪಚಾರಕ್ಕೆ ಸಮಸ್ಯೆ ಉಂಟಾಗಿದೆ. ಕಾಳಿ ನದಿಯ ಜಲಕ್ರೀಡೆ ಆಡಲು ದಾಂಡೇಲಿ ಕಡೆ ಪ್ರವಾಸಿಗರ ಮುಖ ಮಾಡಿದ್ದಾರೆ. ಆದರೆ, ಊಟ ಉಪಚಾರ ಪೂರೈಸಲು ಸಿಲಿಂಡರ್ ಕೊರತೆಯಿಂದಾಗಿ ರೆಸಾರ್ಟ್ಗಳು ತಮ್ಮ ಅತಿಥಿಗಳನ್ನು ಕಳೆದುಕೊಳ್ಳುವ ಆತಂಕ ಉಂಟಾಗಿದೆ.

‘ವಾರಾಂತ್ಯದಲ್ಲಿ ಅತಿ ಹೆಚ್ಚು ಅತಿಥಿಗಳು ರೆಸಾರ್ಟ್ ಹಾಗೂ ಹೋಂ ಸ್ಟೇ ಗಳಿಗೆ ಭೇಟಿ ನೀಡುತ್ತಾರೆ. ಏಕಾಏಕಿ ವಾಣಿಜ್ಯ ಬಳಕೆ ಸಿಲಿಂಡರ್ ಸ್ಥಗಿತ ಗೊಳಿಸಿರುವುದರಿಂದ ಅಡುಗೆ ಮಾಡಲು ಪರದಾಡುವ ಸ್ಥಿತಿ ಉಂಟಾಗಿದೆ. ಮುಂಗಡ ಬುಕ್ಕಿಂಗ್ ಮಾಡಿದ ಗ್ರಾಹಕರು ನೋಂದಣಿ ರದ್ದುಗೊಳಿಸುತ್ತಿದ್ದಾರೆ’ ಎಂದು ಹೋಂ ಸ್ಟೇ ಮಾಲೀಕ ಪ್ರಶಾಂತ ಬಿ. ಹೇಳಿದರು.

‘ಎಣ್ಣಿಯಲ್ಲಿ ಕರಿಯುವ ಕಚೋರಿ, ವಡಾ, ಕಬಾಬ್, ಬಜ್ಜಿ ಮುಂತಾದ ತಿನಿಸುಗಳನ್ನು ಕೈಬಿಟ್ಟು ಮಂಡಕ್ಕಿ, ಗಿರ್ಮಿಟ್ನಂತಹ ತಿನಿಸುಗಳನ್ನು ತಯಾರಿಸಿ ಮಾಡಿ ಮಾರಾಟ ಮಾಡಬೇಕಿದೆ’ ಎಂದು ಸೋಮಾನಿ ವೃತ್ತದಲ್ಲಿನ ಹೋಟೆಲ್ ಮಾಲೀಕರೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.