ದಾಂಡೇಲಿ: ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರಿನ ಕೊರತೆ ಉಂಟಾಗಬಾರದು ಎನ್ನುವ ಉದ್ದೇಶದಿಂದ ನಗರದ ರೋಟರಿ ಕ್ಲಬ್ ವತಿಯಿಂದ ಸಾರ್ವಜನಿಕರಿಗೆ ಪಕ್ಷಿಗಳಿಗೆ ನೀರುಣಿಸುವ ಸಲುವಾಗಿ ಮಣ್ಣಿನ ಬಟ್ಟಲುಗಳನ್ನು ಶುಕ್ರವಾರ ವಿತರಿಸಲಾಯಿತು.

ರೋಟರಿ ಕ್ಲಬ್ ಅಧ್ಯಕ್ಷ ರಾಹುಲ್ ಬಾವಾಜಿ ಮಾತನಾಡಿ, ಬಿಸಿಲಿನ ಹೊಡೆತದಿಂದ ಪಕ್ಷಿಗಳಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಇದನ್ನು ತಪ್ಪಿಸಲು ಮನೆಯ ಎತ್ತರದ ಪ್ರದೇಶದಲ್ಲಿ ಸಾರ್ವಜನಿಕರಿಗೆ ನೀಡಿರುವ ಪಾತ್ರಗಳಲ್ಲಿ ನೀರು ತುಂಬಿ ಇಡುವಂತೆ ಹಾಗೂ ಪಕ್ಷಿಗಳಿಗೆ ಕಾಳು ಹಾಕುವಂತೆ ಮನವಿ ಮಾಡಿದರು.

ಉಪ ಅರಣ್ಯ ವಲಯ ಅಧಿಕಾರಿ ಸಂದೀಪ್ ನಾಯಕ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ್ದರು.

ರೋಟರಿ ಕ್ಲಬ್ ಕಾರ್ಯದರ್ಶಿ ಅಶುತೋಷ ಕುಮಾರ್ ರೈ, ಖಜಾಂಚಿ ಲಿಯೋ ರಫೆಲ್ ಪಿಂಟೊ, ಎಸ್. ಜಿ ಬಿರಾದಾರ್, ಆರ್. ಪಿ ನಾಯಕ ಯೋಗೇಶ್ ಸಿಂಗ, ಸುಧಾಕರ ಶೆಟ್ಟಿ, ಶೇಖರ್ ಪೂಜಾರಿ, ಮಿಥುನ್ ನಾಯಕ, ಅನುಪ್ ಮದಡೋಲ್ಕರ, ಜೋಸೆಫ ಗೊನ್ಸಾಲ್ವೆಸ್, ರಾಜೇಶ್ ವೆರ್ನೇಕರ್, ಡಾ.ಜ್ಞಾನದೀಪ್ ಗೋಂಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.