ದಾಂಡೇಲಿ: ದಂಡಕಾರಣ್ಯ ಇಕೋ ಪಾರ್ಕ್ನಲ್ಲಿ ಕೆನೋಪಿ ವಾಕ್ ನಿರ್ಮಾ ಣಕ್ಕೆ ಚಿಂತನೆಯನ್ನು ನಡೆಸಲಾಗಿದೆ ಎಂದು ಹಳಿಯಾಳ ಡಿಸಿಎಫ್ ಪ್ರಶಾಂತಕುಮಾರ ಕೆ.ಸಿ ಹೇಳಿದರು.

ದಂಡಕಾರಣ್ಯ ಇಕೋ ಪಾರ್ಕ್ನ ಪ್ರಗತಿ ಹಾಗೂ ನಗರ ಯೋಜನೆಯ ಅಡಿಯಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾಮಗಾರಿಗಳ ಕುರಿತು ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

‘ಕೇಂದ್ರ ಸರಕಾರದ ನಗರವನ ಯೋಜನೆ ಮಂಜೂರಾಗಿದ್ದು ಅತಿ ಎತ್ತರದ ಗೋಪುರ ನಿರ್ಮಾಣ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಗಣಿತ ಮತ್ತು ವಿಜ್ಞಾನ ಪ್ರಯೋಗಾಲಯವನ್ನು ವಿನೂತನ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ವಾಕಿಂಗ್ ಪಾಥ್, ಸೈಕಲ್ ಸಂಚಾರಕ್ಕೆ ವಿಶೇಷ ವ್ಯವಸ್ಥೆ ಹಾಗೂ ಪರಿಸರ ಸಂರಕ್ಷಣೆ ಜಾಗೃತಿಯನ್ನು ಮೂಡಿಸುವ ವಿವಿಧ ಕಾರ್ಯಗಳು ನಡೆಯಲಿದೆ’ ಎಂದರು.

ಎಸಿಎಫ್ ಸಂತೋಷ ಚವ್ಹಾಣ್ ಮಾತನಾಡಿ ಕೇಂದ್ರ ಸರಕಾರದ ನಗರವನ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳ ಕುರಿತು ಮಾಹಿತಿಯನ್ನು ನೀಡಿದರು. ಆರ್ಎಫ್ಒ ಎನ್.ಎಲ್.ನದಾಫ್, ಸಮಿತಿ ಸದಸ್ಯರಾದ ಮೋಹನ ಹಲವಾಯಿ, ಕೀರ್ತಿ ಗಾಂವಕರ, ಅನಿಲ್ ದಂಡಗಲ, ಸಂದೇಶ್ ಜೈನ್, ಗೋಪಿ ಚೌವ್ಹಾಣ್ ಇದ್ದರು.

ಉಪ ವಲಯ ಅರಣ್ಯಾಧಿಕಾರಿ ಸಂದೀಪ್ ನಾಯ್ಕ ವಾರ್ಷಿಕ ವರದಿ ಮಂಡಿಸಿದರು. ಗಜಾನನ ಕರಗಾಂವಕರ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-20-1878579547

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.