ದಾಂಡೇಲಿ: ಇಲ್ಲಿಯ ತಾಮೀರ ಕೋ– ಆಪರೇಟಿವ್ ಸೊಸೈಟಿಯಲ್ಲಿ ₹5.09 ಕೋಟಿ ಮೊತ್ತದ ದುರುಪಯೋಗ ಮತ್ತು ವಂಚನೆ ಪ್ರಕರಣ ಪತ್ತೆಯಾಗಿದ್ದು, ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

‘ಸಾಲಗಾರರಿಂದ ಸರಿಯಾದ ಭದ್ರತಾ ಬಾಂಡ್ ಪಡೆಯದೆ ಹಾಗೂ ಕೆವೈಸಿ ದಾಖಲೆಗಳಿಲ್ಲದೆ, ಸುಳ್ಳು ಸಾಲಗಾರರ ಹೆಸರಿನಲ್ಲಿ ನಕಲಿ ಬಂಗಾರವನ್ನು ಅಡವಿಟ್ಟು ಸಾಲ ಮಂಜೂರು ಮಾಡಲಾಗಿದೆ. ಒಟ್ಟು 208 ಖಾತೆಗಳ ಮೂಲಕ ₹5,09,09,450 ಮೊತ್ತವನ್ನು ಪಡೆದುಕೊಂಡು, ಅದನ್ನು ಪದಾಧಿಕಾರಿಗಳು ಸ್ವಂತಕ್ಕೆ ಬಳಸಿಕೊಂಡಿದ್ದಾರೆ’ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಸೊಸೈಟಿಯ ದಾಂಡೇಲಿ ಶಾಖೆಯಲ್ಲಿ 2021ರ ಮಾರ್ಚ್ 17ರಿಂದ 2024ರ ಜನವರಿ 2ರ ಅವಧಿಯಲ್ಲಿ ವ್ಯವಸ್ಥಿತವಾಗಿ ಸಂಚು ರೂಪಿಸಿ ವಂಚನೆ ಎಸಗಲಾಗಿದೆ. 2023–24ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿ ಹಗರಣ ಬಯಲಿಗೆ ಬಂದಿದೆ.

‘ಸಂಘದ ಆಡಳಿತ ಮಂಡಳಿ ಅಸ್ತಿತ್ವದಲ್ಲಿ ಇಲ್ಲದ ಕಾರಣ, ಆಡಳಿತಾಧಿಕಾರಿಗಳು ಹಾಗೂ ಕಾರವಾರದ ಉಪ ನಿಬಂಧಕರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕಾದ ಹಿನ್ನೆಲೆಯಲ್ಲಿ ದೂರು ದಾಖಲಿಸಲು ವಿಳಂಬವಾಗಿದೆ’ ಎಂದು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಮೊಹ್ಮದ ಅಜೀಮ್ ರುಕ್ಷುದ್ದೀನ್ ಶೇಖ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಹೊನ್ನಾವರ: ತಾಲ್ಲೂಕಿನ ಕಾಸರಕೋಡದಲ್ಲಿರುವ ದುರ್ಗಾಂಬಾ ಹೋಟೆಲ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ತಡರಾತ್ರಿ ವಾಹನವೊಂದು ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದಾರೆ.

ಕೆಳಗಿನ ಇಡಗುಂಜಿ ಅಂಗಡಿಮನೆ ನಿವಾಸಿ ಕಿರಣ ಬಾಲಚಂದ್ರ ನಾಯ್ಕ (24) ಮೃತರು.

‘ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಡಿಕ್ಕಿ ಹೊಡೆದ ವಾಹನದ ಗುರುತು ಪತ್ತೆಯಾಗಿಲ್ಲ’ ಎಂದು ಇಲ್ಲಿನ ಪೊಲೀಸರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-20-713176977

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.