ದಾಂಡೇಲಿ: ‘ದಂತ ಉಚಿತ ತಪಾಸಣೆ ಶಿಬಿರವನ್ನು ಮಾರ್ಚ್ 27ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3ರ ವರೆಗೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ’ ಎಂದು ರೋಟರಿ ಕ್ಲಬ್ ದಾಂಡೇಲಿ ಘಟಕದ ಅಧ್ಯಕ್ಷ ಅಶುತೋಷ್ ಕುಮಾರ್ ರಾಯ್ ಹೇಳಿದರು.

ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೋಟರಿ ಕ್ಲಬ್, ಧಾರವಾಡದ ಎಸ್ಡಿಎಂ ದಂತ ವೈದ್ಯಕೀಯ ಕಾಲೇಜು, ಭಾರತೀಯ ದಂತ ವೈದ್ಯಕೀಯ ಸಂಘದ ಜಿಲ್ಲಾ ಘಟಕ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ಶಿಬಿರ ನಡೆಯಲಿದೆ. ದಂತ ಉಚಿತ ತಪಾಸಣೆ, ದಂತ ಕ್ಲಿನಿಂಗ್, ದಂತ ಕೀಳುವುದು, ದಂತ ಫಿಲ್ಲಿಂಗ್ ಮತ್ತು ಔಷಧಿಗಳನ್ನು ನೀಡಲಾಗುತ್ತದೆ’ ಎಂದರು.

ಭಾರತೀಯ ದಂತ ವೈದ್ಯಕೀಯ ಸಂಘ ಉತ್ತರ ಕನ್ನಡ ಶಾಖೆಯ ಅಧ್ಯಕ್ಷ ಡಾ.ಎಸ್.ಎನ್.ದಫೇದಾರ ಮಾತನಾಡಿ, ‘ಶಿಬಿರದಲ್ಲಿ ಭಾಗವಹಿಸುವವರು ಶಿಬಿರದ ದಿನ ಬೆಳಿಗ್ಗೆ 9 ಗಂಟೆಯಿಂದ 10 ಗಂಟೆಯೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹಲ್ಲು ಕೀಳಿಸಬೇಕಾದವರು ಬಿಪಿ ಮತ್ತು ಶುಗರ್ ವರದಿ ತರಬೇಕು’ ಎಂದರು.

ರೋಟರಿ ಕ್ಲಬ್ ಖಜಾಂಚಿ ಲಿಯೋ ಪಿಂಟೋ, ಸುಧಾಕರ ಶೆಟ್ಡಿ, ಡಾ.ಅನೂಪ್ ಮಾಡ್ದೋಳ್ಕರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-20-201354974

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.