ದಾಂಡೇಲಿ: ‘ದೇಶ ಧರ್ಮದಿಂದ ಮಾತ್ರ ಉಳಿಯಲು ಸಾಧ್ಯ. ಧರ್ಮ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿದಾಗ ಮಾತ್ರ ರಾಷ್ಟ್ರದ ರಕ್ಷಣೆ ಸಾಧ್ಯ’ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ್ಯ ಪ್ರಮುಖ ಶ್ರೀಕಾಂತ ಶೆಟ್ಟಿ ಹೇಳಿದರು.

ಹಳೇ ನಗರಸಭೆಯ ಮೈದಾನದಲ್ಲಿ ಬುಧವಾರ ಹಿಂದೂ ಸಮಾಜೋತ್ಸವ ಸಮಿತಿ ಆಶ್ರಯದಲ್ಲಿ ನಡೆದ ಹಿಂದೂ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಇನ್ನೊಂದು ಧರ್ಮದ ಬಗ್ಗೆ ದ್ವೇಷಕ್ಕಿಂತ ಮಾತ್ಸರ್ಯವೇ ನಮ್ಮ ಧರ್ಮಕ್ಕೆ ಕಂಟಕ. ಮಕ್ಕಳಿಗೆ ಧರ್ಮದ ಆಚರಣೆ, ನಂಬಿಕೆ, ಧರ್ಮ ಪಾಲನೆ ಹಾಗೂ ಬೋಧನೆ ಬಗ್ಗೆ ಮನೆಯಿಂದಲೇ ಸಂಸ್ಕಾರ ಕೊಡುವ ಕೆಲಸ ಆಗಬೇಕು. ಅನ್ಯ ಧರ್ಮೀಯಲ್ಲಿರುವ ಪರಸ್ಪರ ಒಗ್ಗಟ್ಟು, ಆಚರಣೆ, ಧರ್ಮ ಶ್ರದ್ಧೆಯ ಬಗ್ಗೆ ನಾವು ಅಸೂಯೆ ಪಟ್ಟುಕೊಳ್ಳುತ್ತೇವೆ. ನಾವು ನಮ್ಮ ಧರ್ಮ ಹಾಗೂ ಸಂಸ್ಕಾರ, ಸಂಸ್ಕೃತಿಯನ್ನು ಮಕ್ಕಳಲ್ಲಿ ಮೈಗೂಡಿಸಿಕೊಳ್ಳುವ ಮೂಲಕ ಧರ್ಮ ಸಂಸ್ಥಾಪನೆಗೆ ಮುಂದಾಗಬೇಕು’ ಎಂದರು.

ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ವಾಸುದೇವ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ, ‘ತಾಯಂದಿರು ಮಕ್ಕಳಿಗೆ ಧರ್ಮ ಸಂಸ್ಕಾರ ನೀಡಿದಾಗ ಸದೃಢ ಹಿಂದೂ ರಾಷ್ಟ್ರ ನಿರ್ಮಾಣ ಸಾಧ್ಯ. ಜಾಗೃತಿ ಮೂಡಿಸುವ ಉದ್ದೇಶದಿಂದ 3,500 ಮನೆಗಳಿಗೆ ಭಗವಾದ್ ಧ್ವಜ ವಿತರಿಸಲಾಗಿದ್ದು, ಹಿಂದೂ ಬಾಂಧವರ ಉತ್ಸಾಹ ಸಮಾವೇಶ ಯಶಸ್ವಿಗೆ ಕಾರಣವಾಗಿದೆ’ ಎಂದರು.

ಹಿಂದೂ ಸಮಾಜೋತ್ಸವ ಸಮಿತಿಯಿಂದ ಶ್ರೀಕಾಂತ ಶೆಟ್ಟಿ, ಪಶು ವೈದ್ಯೆ ಡಾ.ಅರ್ಚನಾ ಸಿನ್ಹಾ ಪಶುವೈದ್ಯ ಇಲಾಖೆಯ ಹಿರಿಯ ಪಶು ಪರಿವೀಕ್ಷಕ ಪ್ರವೀಣ ಅವರಾದಿ ಮತ್ತು ಪಶುವೈದ್ಯ ಇಲಾಖೆಯ ಲವ ಶೆಟ್ಟಣ್ಣನವರ ಹಾಗೂ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟು ಸಾನಿಕಾ ಥೋರತ್ ಅವರನ್ನು ಸನ್ಮಾನಿಸಲಾಯಿತು.

ಸದ್ಭಾವನೆ ಸಮಿತಿ ಅಧ್ಯಕ್ಷ ಸಂತೋಷ ಸೋಮಯಾಜಿ ಸ್ವಾಗತಿಸಿದರು. ಪದ್ಮಶ್ರೀ ಜೈನ್ ನಿರೂಪಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಶೋಭಾ ಯಾತ್ರೆ ನಡೆಯಿತು. ಈ ಶೋಭಾ ಯಾತ್ರೆಯಲ್ಲಿ ಶ್ರೀಕೃಷ್ಣ ಪ್ರತಿಮೆ ಜನಮನ ಸೆಳೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-20-472621439

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.