ದಾಂಡೇಲಿ: ನ್ಯಾಯಾಧೀಶರಾಗಿ ಆಯ್ಕೆಯಾದ ಪದ್ಮಾವತಿ ಮಾದಿಗ ಅವರ ಮನೆಗೆ ಭೇಟಿ ನೀಡಿದ ಶಾಸಕ ಆರ್.ವಿ. ದೇಶಪಾಂಡೆ, ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಮಾತನಾಡಿದ ಶಾಸಕ, ‘ಬಡತನದಲ್ಲಿ ಓದಿ ಸಹೋದರರು ಮತ್ತು ಮನೆಯವರ ನೆರವಿನೊಂದಿಗೆ ವಕೀಲರಾಗಿ ಇದೀಗ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ಇದು ದಾಂಡೇಲಿಗೆ ಅಭಿಮಾನದ ಸಂಗತಿ. ಯುವಜನರಿಗೆ ಪ್ರೇರಣೆ’ ಎಂದರು.

ಪದ್ಮಾವತಿ ಮಾದಿಗ ಅವರ ತಾಯಿ ಮತ್ತು ಸಹೋದರರು ಈಗಲೂ ನಡೆಸುತ್ತಿರುವ ಪಾದರಕ್ಷೆ ಅಂಗಡಿಗೆ ಭೇಟಿ ನೀಡಿದ ಶಾಸಕರು, ಅವರ ಕಸುಬಿಗೆ ನೆರವು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವಕರ, ಉಪಾಧ್ಯಕ್ಷ ಬಶೀರ್ ಗಿರಿಯಾಲ, ಕಾರ್ಯದರ್ಶಿ ಉಸ್ಮಾನ್ ಶೇಖ್, ಜಿಲ್ಲಾ ಕಾಂಗ್ರೇಸ್ ಕಾರ್ಯದರ್ಶಿ ಆರ್.ಪಿ. ನಾಯ್ಕ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-20-10640117

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.