ದಾಂಡೇಲಿ: ಅಂಬೇವಾಡಿಯ ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಮತ್ತು ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟ್ ಆಶ್ರಯದಡಿ ಭಗವಾನ್ ಮಹಾವೀರ ಜಯಂತಿ ಸೋಮವಾರ ಆಚರಿಸಲಾಯಿತು.

ತಹಶೀಲ್ದಾರ್ ಶೈಲೇಶ ಪರಮಾನಂದ ಮಾತನಾಡಿ, ‘ಮಹಾವೀರ ಜಯಂತಿ ಕೇವಲ ಧಾರ್ಮಿಕ ಹಬ್ಬವಲ್ಲ, ಬದಲಾಗಿ ಕರುಣೆ, ನೈತಿಕತೆ ಮತ್ತು ಅಹಿಂಸೆಯನ್ನು ಪ್ರತಿಬಿಂಬಿಸುವ ದಿನವಾಗಿದೆ. ಬದುಕು ಮತ್ತು ಬದುಕಲು ಬಿಡಿ’ ಎಂಬ ಅವರ ಸಂದೇಶವು ಮಾನವೀಯತೆಗೆ ಶಾಶ್ವತ ಸ್ಫೂರ್ತಿಯಾಗಿ ಉಳಿದಿದೆ’ ಎಂದರು.

ಮಹಾವೀರ ಜಯಂತಿ ಆಚರಣೆಯ ಉದ್ದೇಶ ಮತ್ತು ಮಹಾವೀರರ ಬೋಧನೆಗಳ ಕುರಿತು ಪದ್ಮಾವತಿ ಗಾಳಿ, ಸಿದ್ದಿ ಆಶೀಷ್ ಬನ್ಸಾಲಿ ಉಪನ್ಯಾಸ ನೀಡಿದರು.

ತಾಲ್ಲೂಕು ಆಡಳಿತದ ಪರವಾಗಿ ಜೈನ ಸಮಾಜದ ಹಿರಿಯರಾದ ಶಾಂತಿನಾಥ ಟೋಪಣ್ಣನವರ, ಲೆಕ್ಕ ಪರಿಶೋಧಕ ಆಶೀಷ್ ಬನ್ಸಾಲಿ ಅವರನ್ನು ಸನ್ಮಾನಿಸಲಾಯಿತು.

ಪೌರಾಯುಕ್ತ ವಿವೇಕ ಬನ್ನೆ, ಜೈನ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಸಂದೇಶ್ ಜೈನ, ಕಾರ್ಯಾಧ್ಯಕ್ಷ ಎಂ.ಬಿ.ನಾಗೇಂದ್ರನಾಥ, ಪ್ರಧಾನ ಕಾರ್ಯದರ್ಶಿ ಮಹಾವೀರ ನೆರ್ಲೇಕರ, ಕಂದಾಯ ನಿರೀಕ್ಷಕ ರಾಘವೇಂದ್ರ ಪಾಟೀಲ್, ಮುಕುಂದ ಬಸವಮೂರ್ತಿ, ಗೌಡಪ್ಪ ಬನಾಕದಿನ್ನಿ, ದೀಪಾಲಿ ಪೆಡ್ನೇಕರ, ರವಿ ಕಮ್ಮಾರ, ಪತ್ರಕರ್ತ ಪ್ರವೀಣಕುಮಾರ ಸುಲಾಖೆ, ಜೈನ ಸಮಾಜದ ಪ್ರಮುಖರಾದ ಉದಯ ಶಾ, ಅಜಿತ್ ಕರಡೆನ್ನವರ, ಅಭಯ ಸದಲಗಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-20-1403361968

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.