ದಾಂಡೇಲಿ: ಜಿಲ್ಲಾಡಾಳಿತ, ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯ 2025 - 26 ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಮಂಜೂರಾದ ದಾಂಡೇಲಿಯ ಅಂಜುಮನ್ ಅಹಲ್ಲೆ ಸುನ್ನತ್ ಸಂಸ್ಥೆಯ ಅಡಿಯಲ್ಲಿರುವ 11 ಮಸೀದಿಗಳ ನವೀಕರಣ ಕಾಮಗಾರಿಗೆ ನಗರದ ಬಾಂಬೆಚಾಳದಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಸೋಮವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಆರ್.ವಿ.ದೇಶಪಾಂಡೆ ಈ ಭೂಮಿಯಲ್ಲಿ ಹುಟ್ಟಿದ ಮನುಷ್ಯರೆಲ್ಲರೂ ಒಂದೇ. ನನಗೆ ಎಲ್ಲ ಧರ್ಮ ಬಾಂಧವರು ಒಂದಾಗಿಯೇ ಕಾಣುತ್ತಾರೆ. ಜಾತಿ ಜಾತಿಗಳ ನಡುವೆ,ಧರ್ಮ ಧರ್ಮಗಳ ನಡುವೆ ಬಡಿದಾಡಿಕೊಳ್ಳುವುದರ ಬದಲು ಸರ್ವಧರ್ಮ ಸಮನ್ವಯತೆಯ ಬದುಕನ್ನು ನಾವು ಕಟ್ಟಿಕೊಂಡಾಗ ಮಾನವನಾಗಿ ಹುಟ್ಟಿದ್ದಕ್ಕೆ ಸಾರ್ಥಕವಾಗುತ್ತದೆ ಎಂದರು.

ಅಂಜುಮನ್ ಅಹಲ್ಲೆ ಸುನ್ನತ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಶೇಖ ಮಾತನಾಡಿ, ನಮ್ಮ ಮನವಿಗೆ ಸ್ಪಂದಿಸಿ ಸಾಕಷ್ಟು ಅನುದಾನ ತಂದಿದ್ದಾರೆ. ಅಂಜುಮನ್ ಅಹಲ್ಲೆ ಸುನ್ನತ್ ಸಂಸ್ಥೆಯಡಿ ಇರುವ 11 ಮಸೀದಿಗಳ ನವೀಕರಣಕ್ಕೆ ₹1.15 ಕೋಟಿ ರೂ ಅನುದಾನವನ್ನು ಮಂಜೂರು ಮಾಡಲಾಗಿದೆ. ಈ ಬಾರಿ ಅತಿ ಹೆಚ್ಚು ಅನುದಾನವನ್ನು ತಂದುಕೊಟ್ಟ ಕೀರ್ತಿ ಶಾಸಕರಿಗೆ ಸಲ್ಲಬೇಕು ಎಂದರು.

ವೇದಿಕೆಯಲ್ಲಿ ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಅಷ್ಟಾಕ ಶೇಖ, ಅಂಜುಮನ್ ಅಹಲ್ಲೆ ಸುನ್ನತ್ ಸಂಸ್ಥೆಯ ಅಧ್ಯಕ್ಷ ನವಾಜ ಕರೀಂ ಖಾನ್, ಉಪಾಧ್ಯಕ್ಷ ಗೌಸ್ ಖತೀಬ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಹಾಗೂ ಅಧಿಕಾರಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-20-923930465

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.