ದಾಂಡೇಲಿ: ‘ಮನೆ ಕಸ ಸೇರಿದಂತೆ ಘನತ್ಯಾಜ್ಯ ಹೊರಗೆ ಚೆಲ್ಲುವುದಾಗಲಿ, ಚರಂಡಿಯಲ್ಲಿ ಹಾಕುವುದು, ನದಿ ಕೆರೆಗಳಲ್ಲಿ ಎಸೆಯುವದಾಗಲಿ ಮಾಡುವುದು ಕಂಡುಬಂದರೆ ಅಂತವರ ವಿರುದ್ಧ ಕಠಿಣ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಶಾಸಕ ಆರ್.ವಿ.ದೇಶಪಾಂಡೆ ನಗರ ಸಭೆ ಪೌರಾಯುಕ್ತರಿಗೆ ಸೂಚಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನದ ಅಂಗವಾಗಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

‘ಪ್ರತಿ ವಾರ್ಡ್ಗಳಲ್ಲಿ ಐವತ್ತರಿಂದ ನೂರು ಜನರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ನಗರವನ್ನು ಸ್ವಚ್ಛ ಸುಂದರ ನಗರವನ್ನಾಗಿ ಮಾಡುವುದೇ ಈ ಅಭಿಯಾನದ ಉದ್ದೇಶವಾಗಿದೆ. ರೆಸಾರ್ಟ್, ಹೊಂ ಸ್ಟೇ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗೆ ಮಾಲೀಕರು ಆದ್ಯತೆ ನೀಡಬೇಕು. ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನಲ್ಲಿರುವ ನಾಲ್ಕು ವಾರ್ಡ್ ಗಳಲ್ಲಿ ಸ್ವಚ್ಛತೆಯನ್ನು ವೆಸ್ಟ್ ಕೋಸ್ಟ್ ಪೇಪರ್ ವಹಿಸಿಕೊಳ್ಳಬೇಕು. ಪ್ರತಿಯೊಂದು ಸರ್ಕಾರಿ ಇಲಾಖೆಗಳು ಈ ಅಭಿಯಾನಕ್ಕೆ ಕೈಜೋಡಿಸಬೇಕು. ಈ ಅಭಿಯಾನ ನಗರದ ಸ್ವಚ್ಛತೆ ದೃಷ್ಟಿಯಿಂದ ಮಾಡಲಾಗುತ್ತಿದ್ದು, ಪ್ರತಿಯೊಬ್ಬ ನಾಗರಿಕರು ಪೌರಾಡಳಿತಕ್ಕೆ ಸಹಕಾರ ನೀಡಬೇಕು ಎಂದ ಅವರು, ಪ್ರತಿಶತ ನೂರಷ್ಟು ಸಾಧ್ಯವಾಗದೆ ಇದ್ದರೂ ಕಣ್ಣಿಗೆ ಕಾಣುವಷ್ಟು ಸ್ವಚ್ಛತೆ ಇರಲೇಬೇಕು’ ಎಂದರು.

ಮಾರ್ಚ್ 31ರಿಂದ ಪ್ರತಿ ವಾರ್ಡ್ ಗಳಲ್ಲಿ ಬೆಳಿಗ್ಗೆ 6ರಿಂದ ಸ್ವಚ್ಛತಾ ಅಭಿಯಾನ ನಡೆಯಲಿದೆ ಎಂದರು.

ರಸ್ತೆಯಲ್ಲಿ ನಿಂತಿರುವ ಗುಜರಿ ವಾಹನಗಳನ್ನು ಜಪ್ತಿ ಮಾಡಿ ಮಾಲೀಕರ ಮೇಲೆ ಕ್ರಮ ಕೈಗೊಂಡು ದಂಡ ವಿಧಿಸಬೇಕೆಂದು ಡಿವೈಎಸ್ಪಿ ಶಿವಾನಂದ ಮದರಖಂಡಿ ಅವರಿಗೆ ಸೂಚಿಸಿದರು.

ಅಂಬೇವಾಡಿಯ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ಸ್ವಚ್ಛತೆ ಕುರಿತು ಜಾಥಾ ನಡೆಯಿತು.

ನಗರದ ಸ್ವಚ್ಛತೆ ಕುರಿತು ಸರಸ್ವತಿ ರಜಪೂತ, ಇಕ್ಬಾಲ್ ಶೇಖ್, ದಾದಾಪೀರ್ ಮುಲ್ಲಾ ಆಫ್ರೀನ್ ಕಿತ್ತೂರ್, ಪೌರಾಯುಕ್ತ ವಿವೇಕ ಬನ್ನೆ, ತಹಶೀಲ್ದಾರ್ ಶೈಲೇಶ ಪರಮಾನಂದ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಸಿ .ಹಾದಿಮನಿ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಅಶ್ಫಾಕ್ ಶೇಖ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಪಂಚ ಗ್ಯಾರಂಟಿ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ರಿಯಾಜ್ ಸಯ್ಯದ್, ಯಾಸ್ಮಿನ್ ಕಿತ್ತೂರ, ಆರ್.ಪಿ.ನಾಯ್ಕ, ತಸವ್ವರ ಸೌದಾಗರ, ಬಶೀರ್ ಗಿರಿಯಾಲ, ವೆಸ್ಟ್ ಕೋಸ್ಟ್ ಪಿಆರ್ಒ ಗಳಾದ ರಾಜೇಶ ತಿವಾರಿ, ರಾಘವೇಂದ್ರ ಆರ್.ಜೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-20-754262073

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.