ಶಿರಸಿ: ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ತಾಲ್ಲೂಕಿನ ಅಮ್ಮಿನಳ್ಳಿಯ ದಿನೇಶ ಮಡಿವಾಳ ಅವರಿಗೆ ಪ್ರತಿಷ್ಠಿತ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಗೌರವ ಲಭಿಸಿದೆ.

ಸೂರ್ಯೋದಯವನ್ನೇ ಮೂಲ ವಸ್ತುವಾಗಿಟ್ಟುಕೊಂಡು ದಿನೇಶ ಅವರು 1,750 ಕವಿತೆಗಳನ್ನು ರಚಿಸಿ ಈ ದಾಖಲೆ ಬರೆದಿದ್ದಾರೆ. ಇವುಗಳಲ್ಲಿ ಸೂರ್ಯನ ವಿವಿಧ ಹೆಸರುಗಳನ್ನು 3,327 ಬಾರಿ ಬಳಸಲಾಗಿದ್ದು, ಒಟ್ಟು 35,038 ಸಾಲುಗಳ ಬೃಹತ್ ಸಾಹಿತ್ಯ ಭಂಡಾರವನ್ನೇ ಸೃಜಿಸಿದ್ದಾರೆ.

ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಬಳಸಿ ರಚಿಸಿದ ಕಾವ್ಯ ಹಾಗೂ 307 ಸಾಲುಗಳ ಸುದೀರ್ಘ ಸೂರ್ಯ ಸಿರಿ ಕವಿತೆ ಇವರ ಸಾಹಿತ್ಯದ ವಿಶೇಷತೆ. ಈ ಹಿಂದೆ ಇವರ ಸ್ವರ್ಗ ನಿಸರ್ಗ ಕವನ ಸಂಕಲನ ಬಿಡುಗಡೆಯಾಗಿ ಜನಪ್ರಿಯತೆ ಗಳಿಸಿತ್ತು. ಆಕಾಶವಾಣಿಯಲ್ಲಿ ಕವನ ವಾಚನ ಹಾಗೂ ಕನ್ನಡ ಸಾಹಿತ್ಯ ಭೂಷಣ ರಾಷ್ಟ್ರೀಯ ಪ್ರಶಸ್ತಿಗೂ ದಿನೇಶ ಅವರು ಭಾಜನರಾಗಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-20-1381097453

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.