ಯಲ್ಲಾಪುರ: ತಾಲ್ಲೂಕಿನ ಮದನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಳಸೂರಿನಲ್ಲಿ ಶನಿವಾರ ರಾತ್ರಿ ಆನೆಗಳ ಹಿಂಡು ತೋಟಕ್ಕೆ ದಾಳಿ ಮಾಡಿದ್ದು ಅಡಿಕೆ ಸಸಿಯನ್ನು ಹಾಳುಮಾಡಿವೆ.
ಕೃಷ್ಣ ನಾಗಪ್ಪ ಜಕ್ಕಣ್ಣವನರ್ ಅವರಿಗೆ ಸೇರಿದ 15 ಫಲ ಬರುವ ಹಂತದಲ್ಲಿದ್ದ ಅಡಿಕೆ ಸಸಿಗಳನ್ನು ಆನೆಗಳು ಮುರಿದು ಹಾಕಿವೆ. ಅನೇಕ ಬಾಳೆ ಸಸಿಗಳನ್ನು ಹೊಸಕಿ ಹಾಕಿವೆ.
`ಈ ತೋಟಕ್ಕೆ ಮೊದಲು ಆನೆಗಳು ಬಂದಿರಲಿಲ್ಲ. ಇದೇ ಮೊದಲ ಸಲ ಆನೆಗಳು ದಾಳಿಮಾಡಿವೆ. ಕಷ್ಟಪಟ್ಟು ಬೆಳೆಸಿದ ಸಸಿಗಳು ಹಾಳಾದುದ್ದನ್ನು ನೋಡಿದರೆ ಸಂಕಟವಾಗುತ್ತಿದೆ. ಅತಿಕ್ರಮಣ ಜಾಗವಾದ್ದರಿಂದ ಸರ್ಕಾರದ ಯಾವುದೇ ಪರಿಹಾರವೂ ಸಿಗುವುದಿಲ್ಲ’ ಎಂದು ರೈತ ಕೃಷ್ಣ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.