ಶಿರಸಿ: ‘ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಸಂಬಂಧ ಪಾರದರ್ಶಕ ತೀರ್ಮಾನ ಕೈಗೊಳ್ಳುವ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಭರವಸೆ ಸಿಕ್ಕಿತ್ತು. ಆದರೆ, ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಆಡಳಿತ ವ್ಯವಸ್ಥೆಯು ತಾಂತ್ರಿಕ ಸಮೀಕ್ಷೆ ನಡೆಸಲು ಅವಕಾಶ ಮಾಡಿಕೊಟ್ಟಿರುವುದು ತಪ್ಪು’ ಎಂದು ಪರಿಸರ ಕಾರ್ಯಕರ್ತರು ಮತ್ತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ 28ರಂದು ಹೈದರಾಬಾದ್ ಮತ್ತು ಬೆಂಗಳೂರು ಕಚೇರಿಯ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್ಡಬ್ಲ್ಯುಡಿಎ) ಹಾಗೂ ರಾಜ್ಯ ಜಲಸಂಪನ್ಮೂಲ ಇಲಾಖೆಯ ಹಿರಿಯ ವಿಜ್ಞಾನಿಗಳು, ಎಂಜಿನಿಯರ್ಗಳು ಮತ್ತು ನದಿ ಜೋಡಣೆ ತಜ್ಞರು ವಿಸ್ತ್ರತ ಯೋಜನಾ ವರದಿಗೆ (ಡಿಪಿಆರ್) ಪೂರಕವಾಗಿ ಯೋಜನಾ ಸ್ಥಳಗಳಿಗೆ ಭೇಟಿ ತಾಂತ್ರಿಕ ಕಾರ್ಯಸಾಧ್ಯತಾ ಮಾಹಿತಿ ಸಂಗ್ರಹಿಸಿದ್ದಾರೆ.

‘ನದಿ ಜೋಡಣೆ ವಿಸ್ತ್ರತಾ ಯೋಜನಾ ವರದಿ (ಡಿಪಿಆರ್) ಕೈಬಿಡಲು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸದಸ್ಯರು ತುಂಬಾ ದಿನಗಳ ಹಿಂದೆಯೇ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದರು. ನೀರಾವರಿ ತಜ್ಞರು, ಪರಿಸರವಾದಿಗಳು ಮತ್ತು ಯೋಜನೆ ಅನುಷ್ಠಾನಾಧಿಕಾರಿಗಳ ಜಂಟಿ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಮತ್ತು ಪುನರ್ ಪರಿಶೀಲಿಸುವ ಭರವಸೆ ಸಿಕ್ಕಿತ್ತು. ಆದರೆ, ಇದರ ಮಧ್ಯೆ ತಾಂತ್ರಿಕ ಸಮೀಕ್ಷೆ ನಡೆದಿದೆ. ಜನಾಭಿಪ್ರಾಯಕ್ಕೆ ಮನ್ನಣೆ ನೀಡದೇ ಬಲವಂತವಾಗಿ ಯೋಜನೆಯನ್ನು ಹೇರುವ ಯತ್ನ ನಡೆದಿದೆ’ ಎಂದು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಬಾಲಚಂದ್ರ ಸಾಯಿಮನೆ ತಿಳಿಸಿದರು.

‘ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಯಾವುದೇ ಸಮೀಕ್ಷೆ ನಡೆಸಲು ಅರಣ್ಯ ಇಲಾಖೆಯ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ, ಸಮೀಕ್ಷಾ ತಂಡದವರು ಪ್ರವಾಸಿಗರಂತೆ ಬಂದು ಸ್ಥಳ ಪರಿಶೀಲಿಸಿರುವುದು ವನ್ಯಜೀವಿ ಕಾಯ್ದೆಯ ನೇರ ಉಲ್ಲಂಘನೆ ಆಗಿದೆ. ಸ್ಥಳೀಯ ಅಧಿಕಾರಿಗಳಿಗೂ ಮಾಹಿತಿ ನೀಡಿಲ್ಲ. ಈ ತಾಂತ್ರಿಕ ಸಮೀಕ್ಷೆಯು ಸರ್ಕಾರದ ಪಾರದರ್ಶಕತೆಯನ್ನು ಪ್ರಶ್ನಿಸುವಂತೆ ಮಾಡಿದೆ. ತೀವ್ರ ಸ್ವರೂಪದ ವಿರೋಧವಿದ್ದರೂ ಈ ಯೋಜನೆ ಮುಂದುವರಿಸುತ್ತಿರುವ ಸರ್ಕಾರದ ಹಟಮಾರಿ ಧೋರಣೆಯ ಹಿಂದೆ ಯಾರ ಹಿತಾಸಕ್ತಿ ಅಡಗಿದೆ’ ಎಂದು ಸಮಿತಿಯ ಸಂಚಾಲಕ ಅನಂತ ಹೆಗಡೆ ಅಶೀಸರ ಪ್ರಶ್ನಿಸಿದ್ದಾರೆ.

ಯೋಜನೆ ಸಂಬಂಧ ಭವಿಷ್ಯದಲ್ಲಿ ಎಲ್ಲಿಯೇ ಸಮೀಕ್ಷೆ ಕಾರ್ಯಕ್ಕೆ ಬಂದರೂ ಕೊಳ್ಳ ಸಂರಕ್ಷಣಾ ಸಮಿತಿ ವತಿಯಿಂದ ತಡೆಯಲಾಗುವುದು. ಸಮೀಕ್ಷೆ ನಡೆಸಲು ಅವಕಾಶ ಕೊಡುವುದಿಲ್ಲ.
-ಅನಂತ ಅಶೀಸರ, ಸಮಿತಿ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.