ಗೋಕರ್ಣ: ಸಮೀಪದ ಬೇಲೆಕಾನ, ತದಡಿ, ಅಶೋಕೆಯ ಅಳವಿ ಆಂಜನೇಯ ದೇವರ ವರ್ಧಂತಿ ಉತ್ಸವ ಮಾರ್ಚ್ 26ರಂದು ನಡೆಯಲಿದೆ.

ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಅಳವಿ ಪೂಜೆ ಆಂಜನೇಯ ದೇವರ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಸಂಜೆ ಆಂಜನೇಯ ಮೂರ್ತಿಯನ್ನು ಹೊತ್ತ ಪಲ್ಲಕ್ಕಿಯು ಬೇಲೆಕಾನ ಜಟಗ ದೇವರ ಸನ್ನಿಧಿಯಿಂದ ಆರಂಭಗೊಂಡು ನಂತರ ತದಡಿಯ ಅಶ್ವತ್ಥ ಗಣಪತಿ ದೇವಸ್ಥಾನದ ವರೆಗೆ ತೆರಳಲಿದೆ. ನಂತರ ಅಬ್ಬಿಜಟ್ಟಿ ದೇವರ ಸನ್ನಿಧಿಗೆ ಆಗಮಿಸಿ ಪುನಃ ತನ್ನ ಮೂಲಸ್ಥಾನಕ್ಕೆ ತೆರಳಲಿದೆ. ಧಾರ್ಮಿಕ ವಿಧಿ-ವಿಧಾನಗಳನ್ನು ರಾಜಗೋಪಾಲ ಅಡಿ ಅವರು ನಡೆಸಿಕೊಡಲಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-20-2026710654

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.