ಗೋಕರ್ಣ: ಗೋಕರ್ಣದಲ್ಲಿ ರೈತಾಪಿ ವೃತ್ತಿ ಮಾಡುವ ಹುಳಸೆಕೇರಿ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಹಬ್ಬ ಸೋಮವಾರ ಸಂಜೆ ಆರಂಭವಾಯಿತು. ಪ್ರದೋಷ ಕಾಲದಲ್ಲಿ ಮಹಾಬಲೇಶ್ವರ ದೇವರಿಗೆ ಊರ ಗೌಡರು ಪೂಜೆ ಸಲ್ಲಿಸಿದ ಬಳಿಕ ವಿಧ್ಯುಕ್ತವಾಗಿ ಸುಗ್ಗಿ ಕುಣಿತ ಪ್ರಾರಂಭವಾಯಿತು.

ಗೋಕರ್ಣದ ಹಾಲಕ್ಕಿ ಜನಾಂಗದಲ್ಲಿ ಹುಳಸೆಕೇರಿ ಮತ್ತು ಬಿಜ್ಜೂರು ಎಂಬ ಪಂಗಡಗಳಿವೆ. ಅದರಲ್ಲಿ ಮಹಾಬಲೇಶ್ವರ ದೇವರ ಗೌರವ ಹುಳಸೆಕೇರಿ ಪಂಗಡದವರಿಗೆ ಸಲ್ಲುತ್ತದೆ. ಆದರೆ ಬಿಜ್ಜೂರಿನ ಸುಗ್ಗಿ ನೋಡಲು ಆಕರ್ಷಕ.

ಹೊಸ ಸಂವತ್ಸರದ ಯುಗಾದಿ ಹಬ್ಬ ಮುಗಿದ ನಂತರ ಗಂಗಾವಳಿಯಿಂದ ಅಘನಾಶಿನಿ ವರೆಗಿನ ವಿವಿಧ ಗ್ರಾಮಗಳು ಸೇರಿ 12 ಸೀಮೆ ವ್ಯಾಪ್ತಿಯಲ್ಲಿ ಸುಗ್ಗಿ ಹಬ್ಬ ಪ್ರಾರಂಭವಾಗುತ್ತದೆ. ಮೊದಲು ಹುಳಸೆಕೇರಿ ಹಾಲಕ್ಕಿಗಳು ಸುಗ್ಗಿ ಕಟ್ಟಿದ ನಂತರ ಉಳಿದ ಸೀಮೆಯವರು ಕಟ್ಟುತ್ತಾರೆ.

ಸೋಮವಾರ ಮಹಾಬಲೇಶ್ವರ ದೇವಸ್ಥಾನದಲ್ಲಿ ಮಹಾಪೂಜೆ ನಡೆದ ನಂತರ ದೇವರ ಪಲ್ಲಕ್ಕಿಯೊಂದಿಗೆ ಸುಗ್ಗಿ ತುರಾಯಿ ಕಟ್ಟಿದ ಭಕ್ತರು ಕುಣಿಯುತ್ತ ಸಾಗಿ ಕೋಟಿತೀರ್ಥಕಟ್ಟೆಯಲ್ಲಿ ದೇವರ ನಿಲ್ಲಿಸಿ, ಬಂಡಿಕೇರಿಯ ಅಜ್ಜಿಹಕ್ಕಲಿನ ಮೊದಲೇ ಗುರುತು ಪಡಿಸಿದ ತೋಟದಿಂದ ಅಡಿಕೆ ಮರವನ್ನು ತಂದು, ಪುನಃ ದೇವರ ಪಲ್ಲಕ್ಕಿ ತಿರುಗಿ ಬಂದು ಗಣಪತಿ ದೇವಸ್ಥಾನದ ಎದುರು ಕಾಮನ ಸುಡಲಾಯಿತು. ನಂತರ ಮೂರು ದಿವಸಗಳ ಕಾಲ ಸುಗ್ಗಿ ಹಬ್ಬವನ್ನು ಆಚರಿಸಲಾಗುವುದು.

ಕೊನೆಯ ದಿವಸ ರಥಬೀದಿಯಲ್ಲಿ ವಿವಿಧ ರೂಪಕಗಳ ಹಗರಣದೊಂದಿಗೆ ಹಬ್ಬ ಮುಕ್ತಾಯಗೊಳ್ಳುವುದು. ಪ್ರತಿಯೊಂದು ಮನೆತನದಿಂದಲೂ ಒಬ್ಬರು ಸುಗ್ಗಿ ತುರಾಯಿ ಕಟ್ಟುಲೇಬೇಕು. ಇದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಊರಿನ ಪ್ರತಿ ಮನೆಗಳಲ್ಲೂ ಸುಗ್ಗಿ ಕುಣಿದು, ನಂತರ ಊರ ಯಜಮಾನ ಗೌಡರ ಮನೆಯಿಂದ ವಿಜೃಂಭಣೆಯಿಂದ ಹೊರಟ ಕರಿದೇವರು ಮತ್ತು ಕಲಶವು ತನ್ನ ಸ್ಥಾನಗಳಿಗೆ ಭೇಟಿ ನೀಡಿ, ಬೂದಿ ಎರಚಿಕೊಳ್ಳುವುದರೊಂದಿಗೆ ಸುಗ್ಗಿ ಮುಕ್ತಾಯಗೊಳ್ಳುವುದು.

11 ಗ್ರಾಮಗಳನ್ನೊಳಗೊಂಡ ಬಿಜ್ಜೂರ ಸುಗ್ಗಿ ನೋಡಲು ಮನೋಹರ. ಇವರ ಜನಸಂಖ್ಯೆಯೂ ದೊಡ್ಡದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-20-1069821535

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.