ಗೋಕರ್ಣ: ‘ಎಚ್ಪಿವಿ ಲಸಿಕೆಯು ನಿಗದಿತ ವಯೋಮಿತಿಯ ವಿದ್ಯಾರ್ಥಿನಿಯರು ಪಡೆಯುವುದರಿಂದ ಭವಿಷ್ಯದಲ್ಲಿ ಗರ್ಭಕೋಶದ ಕಂಠದ ಕ್ಯಾನ್ಸರ್ ಬರದಂತೆ ತಡೆಯುತ್ತದೆ’ ಎಂದು ಭದ್ರಕಾಳಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಜಿ.ನಾಯಕ ದೊರೆ ತಿಳಿಸಿದರು.

ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ 14–15 ವರ್ಷದ ಒಳಗಿನ ವಿದ್ಯಾರ್ಥಿನಿಯರಿಗೆ ಲಸಿಕೆ ನೀಡಲು ಆರೋಗ್ಯ ಇಲಾಖೆಯ ನಿರ್ದೇಶನದ ಕುರಿತು ಪಾಲಕರಿಗೆ ತಿಳಿವಳಿಕೆ ನೀಡಲು ಸೋಮವಾರ ಆಯೋಜಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಶುಭಾ ಮಾತನಾಡಿ, ‘ಲಸಿಕೆ ಪಡೆಯುವುದಿರಂದ ಯಾವುದೇ ಅಡ್ಡ ಪರಿಣಾಮ ಇಲ್ಲ. ಸರ್ಕಾರವು ಉಚಿತವಾಗಿ ಕೊಡುವುದರಿಂದ ನಿಮಗೆ ಆರ್ಥಿಕ ಹೊರೆಯೂ ಇಲ್ಲ. ಮಹಿಳೆಯರಿಗೆ ಋತು ಚಕ್ರದ ಏರು ಪೇರಿನಿಂದಾಗಿ ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಬರುವ ಸಾಧ್ಯತೆಗಳನ್ನು ಲಸಿಕೆ ನಿಯಂತ್ರಿಸುತ್ತದೆ’ ಎಂದು ಮಾರ್ಗದರ್ಶನ ನೀಡಿದರು.

ಹಿರಿಯ ಶಿಕ್ಷಕ ಆರ್.ಜಿ. ನಾವಡಾ, ಅಶ್ವಿನಿ ಅನಂತ ಚಿತ್ತಾಲ, ಸಂತೋಷ್ ಕೆ. ನಾಯಕ್, ಭದ್ರಕಾಳಿ ಇಂಗ್ಲಿಷ್ ಮೀಡಿಯಂ ಮುಖ್ಯ ಶಿಕ್ಷಕಿ ರೇವತಿ ಆರ್. ಮಲ್ಲನ್, ಆರೋಗ್ಯ ಸಿಬ್ಬಂದಿ ಲತಾ ಆಚಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.