ಭಾನುವಾರ ಬೆಳಿಗ್ಗೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಪಟ್ಟಣದ ಮೀನು ಪೇಟೆ ಕಡೆ ಹೆಜ್ಜೆ ಹಾಕಿದರೆ, ಸಮುದ್ರದ ಉಪ್ಪುಗಾಳಿಯೇ ಮೊದಲು ಮೈಗೆ ತಾಕುತ್ತದೆ. ನಂತರ ಕಿವಿಗೆ ಕೇಳಿಸುವುದು ಮೀನುಪ್ರಿಯರ ಗದ್ದಲ, ಮೀನುಗಾರರ ಕೂಗು, ಬೆಲೆಪೆಚ್ಚಿನ ಮಾತುಗಳು. ಆ ಗದ್ದಲದ ಮಧ್ಯೆ ಆ ದಿನ ಎಲ್ಲ ಬಾಯಲ್ಲೂ ಒಂದೇ ಮಾತು–‘ಈಶ್ವಣ ಬಂದಿದೆ!’

ಮೀನು ಪೇಟೆಗೆ ಕಾಲಿಟ್ಟಾಗ, ಜನರ ಮುಖದಲ್ಲಿ ವಿಶೇಷ ಉತ್ಸಾಹ ಕಾಣಿಸುತ್ತಿತ್ತು. ಮಳೆಗೆ ಕಾಯುವ ರೈತನಂತೆ, ಈಶ್ವಣ ಋತುವಿಗೆ ಕಾಯುವ ಮೀನುಪ್ರಿಯರ ಹೃದಯದಲ್ಲಿ ಆನಂದದ ತರಂಗಗಳು ಉಕ್ಕಿ ಹರಿಯುತ್ತಿವೆ ಎಂಬುದು ಸ್ಪಷ್ಟವಾಗಿತ್ತು.

ಕರಾವಳಿಯಲ್ಲಿ ಅಕ್ಟೋಬರ್ ತಿಂಗಳು ಎಂದರೆ ಕೇವಲ ಕ್ಯಾಲೆಂಡರ್ನ ಒಂದು ಪುಟ ಬದಲಾವಣೆ ಅಲ್ಲ. ಅದು ಸಮುದ್ರದ ಸ್ವಭಾವ ಬದಲಾವಣೆಯ ಸಂಕೇತ. ಮೇಲಿಂದ ಬೀಸುವ ಚಳಿಗಾಳಿ, ಕಡಲತೀರದ ಮೇಲೆ ಮೃದುವಾಗಿ ಹರಡುವ ಮಂಜು ಇವೆಲ್ಲವೂ ಮೀನುಗಾರರಿಗೆ ಒಂದು ಮುನ್ಸೂಚನೆ–‘ಈಶ್ವಣ ಬರುವ ಕಾಲ ಆಯಿತು!’

ಅಕ್ಟೋಬರ್ನಿಂದ ಮೇ ತಿಂಗಳವರೆಗೆ, ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ ಅರಬ್ಬಿ ಸಮುದ್ರ ತೀರದಲ್ಲಿ ಈಶ್ವಣದ ಸುಗ್ಗಿ. ಈ ಅವಧಿಯಲ್ಲಿ ಮೀನು ಪೇಟೆಗಳಲ್ಲಿ ಜನಸಂದಣಿ ಸ್ವಾಭಾವಿಕ. ಕಾರಣ, ಈಶ್ವಣ ಎಂದರೆ ರುಚಿಯ ರಾಜ.

ಸ್ಥಳೀಯವಾಗಿ ‘ಸರ್ಮೆ’ ಎಂದೂ ಕರೆಯುವ ಈಶ್ವಣದಲ್ಲಿ ಎರಡು ರೀತಿ–ಹೆಣ್ಣು ಮತ್ತು ಗಂಡು. ಹೆಣ್ಣನ್ನು ‘ಹೆಣ್ಣು ಈಶ್ವಣ’ ಎಂದು ಕರೆಯುತ್ತಾರೆ; ಗಂಡನ್ನು ‘ದಾಂಡಿ ಈಶ್ವಣ’ ಎಂದು ಗುರುತಿಸುತ್ತಾರೆ.

ಮೀನಿನ ತಲೆ ನೋಡಿ ಗುರುತಿಸುವ ಕಲೆ ಅನುಭವಿಗಳಿಗಷ್ಟೇ ಸಾಧ್ಯ. ಹೆಣ್ಣು ಈಶ್ವಣ ಸಾಮಾನ್ಯವಾಗಿ ಐದು ಕೆ.ಜಿ.ಯವರೆಗೆ ತೂಗಿದರೆ, ದಾಂಡಿ ಈಶ್ವಣ ಇಪ್ಪತ್ತೈದು ಕೆ.ಜಿ.ಯವರೆಗೂ ಬೆಳೆದಿರುತ್ತದೆ. ಆದರೆ ರುಚಿಯಲ್ಲಿ ಹೆಣ್ಣು ಈಶ್ವಣ ಒಂದು ಕೈ ಮೇಲು ಎಂಬುದು ಮೀನುಪ್ರಿಯರ ಆಂಬೋಣ.

ಉತ್ತರ ಕನ್ನಡದ ಕರಾವಳಿಯಲ್ಲಿ ಇದನ್ನು ಸರಳವಾಗಿ ‘ದೊಡ್ಡ ಮೀನು’ ಎಂದೇ ಕರೆಯುತ್ತಾರೆ. ಹೆಸರು ಸರಳವಾದರೂ, ಅದರ ರುಚಿ ಸಾಮಾನ್ಯವಲ್ಲ.

ಈಶ್ವಣ ಸೀಸನ್ ಆರಂಭವಾದರೆ ಸಾಕು, ಕೆ.ಜಿ.ಗೆ 600 ರಿಂದ 700 ರೂಪಾಯಿಯವರೆಗೆ ಬೆಲೆ. ಕೆಲ ಪೇಟೆಗಳಲ್ಲಿ ತುಂಡುಗಳಾಗಿ ಮಾರಾಟ. ಹೋಟೆಲ್ಗಳಲ್ಲಿ ಅದರ ಫ್ರೈಗೆ ವಿಶೇಷ ಬೇಡಿಕೆ. ಸೀಜನ್ ಹಾಗೂ ತುಂಡಿನ ಗಾತ್ರಕ್ಕೆ ಅನುಗುಣವಾಗಿ ಒಂದು ತುಂಡು 80 ರೂಪಾಯಿಯಿಂದ 400 ರೂಪಾಯಿವರೆಗೂ ದರ ಹೊಂದಿರುತ್ತದೆ.

ಹೋಟೆಲ್ಗಳಲ್ಲಿ ವಿಶೇಷವಾಗಿ ಈಶ್ವಣದ ಕಣ್ಣಿನ ಫ್ರೈಗೆ ಬೇಡಿಕೆ ಜಾಸ್ತಿ. ರುಚಿ, ಸುವಾಸನೆ, ಮೃದುವಾದ ಮಾಂಸದ ಅನುಭವ ಇದರಲ್ಲಿದೆ.

ಬಹುತೇಕ ಮೀನಿನಲ್ಲಿ ಸಣ್ಣ-ಸಣ್ಣ ಮುಳ್ಳುಗಳಿದ್ದು, ಬಲು ಎಚ್ಚರಿಕೆಯಿಂದ ತಿನ್ನುವಂತೆ ಮಾಡುತ್ತವೆ. ಆದರೆ ಈಶ್ವಣದ ವಿಶೇಷತೆ ಎಂದರೆ ಒಂದೇ ದೊಡ್ಡ ಮುಳ್ಳು. ಅದನ್ನು ಸುಲಭವಾಗಿ ತೆಗೆದು ಫ್ರೈ ಮಾಡಬಹುದಾಗಿದ್ದು, ತಿನ್ನುವುದೂ ಸುಲಭ. ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರೂ ಭಯವಿಲ್ಲದೆ ಸವಿಯಬಹುದಾದ ಮೀನು.

ಆದರೆ ಈ ಮೀನನ್ನು ಇತರ ಮೀನಿನಂತೆ ಒಣಗಿಸಿ ಒಣಮೀನಾಗಿ ಮಾಡುವುದು ಸುಲಭವಲ್ಲ. ತಾಜಾ ರೂಪದಲ್ಲೇ ಅದರ ಸುವಾಸನೆ ಮತ್ತು ರುಚಿಯನ್ನು ಸವಿಯಬೇಕು.

ಕರಾವಳಿಯ ಮನೆಗಳಲ್ಲಿ ಈಶ್ವಣ ಬಂದರೆ ಅಡುಗೆಮನೆಯಲ್ಲಿ ಹಬ್ಬದ ಸಂಭ್ರಮ. ಫ್ರೈ, ಮಸಾಲಾ, ಸುಕ್ಕಾ, ಸಾರು, ಚಿಲ್ಲಿ ಫ್ರೈ– ಪ್ರತಿ ರೂಪದಲ್ಲೂ ಈಶ್ವಣ ತನ್ನದೇ ಆದ ರುಚಿಯನ್ನು ಹೊಂದಿರುತ್ತದೆ. ತೆಂಗಿನಎಣ್ಣೆಯಲ್ಲಿ ಬಾಡಿಸಿದ ಮಸಾಲೆ ಹಚ್ಚಿದ ತುಂಡು, ಬೆಂದಾಗ ಹೊರಹೊಮ್ಮುವ ಸುವಾಸನೆ, ಊಟದ ಮೇಜಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಸುತ್ತದೆ.

ಗಾಳ ಹಾಕಿ ಹಾಗೂ ಬಲೆಯ ಮೂಲಕ ಮೀನುಗಾರರು ಈಶ್ವಣವನ್ನು ಬೇಟೆಯಾಡುತ್ತಾರೆ. ಸ್ಥಳೀಯ ಪೇಟೆಗಳನ್ನು ಮಾತ್ರವಲ್ಲ, ಹೊರ ದೇಶಗಳಿಗೂ ಈಶ್ವಣ ರಫ್ತು ಆಗುತ್ತದೆ. ಕರಾವಳಿಯ ಸಮುದ್ರದಿಂದ ಹೊರಟ ಈ ಮೀನು, ದೂರದ ಊರುಗಳಲ್ಲಿ ಸಹ ತನ್ನ ರುಚಿಯ ಸೊಗಸು ತೋರಿಸುತ್ತದೆ.

ಭಾನುವಾರ ಗೋಕರ್ಣ ಮೀನು ಪೇಟೆಯಿಂದ ಮನೆಗೆ ಮರಳುವಾಗ, ಕೈಯಲ್ಲಿ ಈಶ್ವಣದ ತುಂಡು ಇರದಿದ್ದರೂ ಮನಸ್ಸಿನಲ್ಲಿ ಅದರ ಸುವಾಸನೆ ಉಳಿದಿತ್ತು. ಸಮುದ್ರದ ಉಪ್ಪುಗಾಳಿಯ ಜೊತೆ ಬೆರೆತ ಈಶ್ವಣದ ಕಥೆ ಕರಾವಳಿಯ ಜನಜೀವನದ ಅವಿಭಾಜ್ಯ ಅಂಗ.

ಇದೀಗ ಸೀಜನ್ ಆರಂಭವಾಗಿದೆ. ಮೇ ತಿಂಗಳು ಮುಗಿಯುವವರೆಗೆ ಈಶ್ವಣದ ಸುದ್ದಿ, ಸುಗ್ಗಿ, ಸಂಭ್ರಮ–ಇವೆಲ್ಲವೂ ಕರಾವಳಿಯ ಜೀವಂತ ಪರಂಪರೆಯೊಂದಾಗಿ ಮುಂದುವರಿಯುತ್ತವೆ.

ಈಶ್ವಣ ಎಂದರೆ ಕೇವಲ ಒಂದು ಮೀನು ಅಲ್ಲ; ಅದು ಕರಾವಳಿಯ ರುಚಿ ಸಂಸ್ಕೃತಿಯ ಪ್ರತೀಕ.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-51-1159338428

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.