ಗೋಕರ್ಣ: ಕೆಲವು ದಿನಗಳ ಹಿಂದೆ ಗೋಕರ್ಣಕ್ಕೆ ಬಂದಿದ್ದ ತಮಿಳುನಾಡಿನ ಮಿನಿ ಬಸ್ಸೊಂದನ್ನು ಅಪ್ರಾಪ್ತ ವಯಸ್ಸಿನ ಬಾಲಕ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಟಾ ನ್ಯಾಯಾಲಯ ಸೋಮವಾರ ಬಸ್ ಮಾಲೀಕನಿಗೆ ₹25 ಸಾವಿರ ದಂಡ ವಿಧಿಸಿದ್ದಲ್ಲದೇ, ಬಾಲಕನಿಗೆ 25 ವರ್ಷ ಆಗುವವರೆಗೆ ವಾಹನ ಪರವಾನಿಗೆ ನೀಡದಂತೆ ತೀರ್ಪು ನೀಡಿದೆ.

ಏನಿದು ಪ್ರಕರಣ: ಕಳೆದ ನಾಲ್ಕು ದಿನಗಳ ಹಿಂದೆ ಓಂ ಬೀಚ್ ರಸ್ತೆಯಲ್ಲಿ ತಮಿಳುನಾಡಿನ ಅಜಿತ ಎಂಬುವವರ ಮಿನಿಬಸ್ ಅನ್ನು ಅಪ್ರಾಪ್ತ ಬಾಲಕನೊಬ್ಬ ಚಾಲನೆ ಮಾಡಿಕೊಂಡು ಹೋಗುತ್ತಿದ್ದ. ಕರ್ತವ್ಯವದಲ್ಲಿದ್ದ ಪಿ.ಎಸ್.ಐ. ಅನಿಲ್ ಬಿ.ಎಂ ಹಾಗೂ ಸಿಬ್ಬಂದಿ ಮಂಜು ಉಪ್ಪಾರ ಈ ವಾಹನವನ್ನು ಗಮನಿಸಿ ತಕ್ಷಣ ನಿಲ್ಲಿಸಿ ವಶಕ್ಕೆ ಪಡೆದಿದ್ದರು.

ಪಿ.ಐ. ಶ್ರೀಧರ ಮಾರ್ಗದರ್ಶನದಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-20-873777924

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.