ಗೋಕರ್ಣ: ಪ್ರವಾಸೋದ್ಯಮದಲ್ಲಿ ಹೆಸರು ಪಡೆದ ಗೋಕರ್ಣ ಸಾವಯವ ತರಕಾರಿ ಬೆಳೆಯಲ್ಲಿಯೂ ಪ್ರಸಿದ್ಧಿ ಪಡೆದಿದೆ. ಈ ಭಾಗದಲ್ಲಿ ಬೆಳೆಯುವ ತರಕಾರಿಗೆ ಹೆಚ್ಚಿನ ಬೇಡಿಕೆ ಇದೆ.

ರಾಸಾಯನಿಕ ಬಳಕೆ ಮಾಡದೆ, ಅಪ್ಪಟ ಸಾವಯವ ಪದ್ಧತಿಯಲ್ಲಿ ಬೆಳೆಯುವ ತರಕಾರಿ ಬೆಳೆಯ ಹಿಂದೆ ಹಾಲಕ್ಕಿ ಸಮುದಾಯದ ಮಹಿಳೆಯರ ಕಠಿಣ ದುಡಿಮೆ ಇದೆ. ಭತ್ತದ ಕೊಯ್ಲು ಮುಗಿದ ನಂತರ ಮಳೆಗಾಲ ಆರಂಭಗೊಳ್ಳುವವರೆಗೂ ವಿವಿಧ ಬಗೆಯ ತರಕಾರಿ ಬೆಳೆದು ಮಾರುಕಟ್ಟೆಗೆ ತರುವುದು ಇದೇ ಮಹಿಳೆಯರು.

ನಸುಕಿನ ಜಾವ 3 ಗಂಟೆಯಿಂದಲೇ ಗದ್ದೆಯಲ್ಲಿ ದುಡಿಯುವ ಕಾಯಕಕ್ಕೆ ಅವರು ತೊಡಗಿಸಿಕೊಳ್ಳುತ್ತಾರೆ. ತರಕಾರಿ ಸಸಿಗಳಿಗೆ ನೀರೆರೆದು, ಬೆಳೆದ ತರಕಾರಿಯನ್ನು ಅದೇ ದಿನ ಮಾರುಕಟ್ಟೆಗೆ ತರಲಾಗುತ್ತದೆ. ಸೂರ್ಯನ ಬಿಸಿಲು ಬರುವ ಮೊದಲೇ ತರಕಾರಿ ವ್ಯಾಪಾರ ಮುಗಿಸಿ ತಮ್ಮ ಮುಂದಿನ ದಿನನಿತ್ಯದ ಕಾರ್ಯಕ್ಕೆ ಅಣಿಯಾಗುವುದು ದಿನನಿತ್ಯದ ಕಾಯಕ.

‘ತರಕಾರಿಗಳನ್ನು ಶಿರಸಿ, ಯಲ್ಲಾಪುರ, ಕಾರವಾರ ಹಾಗೂ ಹುಬ್ಬಳ್ಳಿ ಮಾರುಕಟ್ಟೆಗೆ ಮಾರಾಟ ಮಾಡಲು ಪ್ರತಿ ದಿನ ನೂರಾರು ಕ್ವಿಂಟಲ್ ಒಯ್ಯಲಾಗುತ್ತದೆ. ವಿವಿಧ ಜಾತಿಯ ಸೊಪ್ಪು, ಬದನೆಕಾಯಿ, ಬೆಂಡೆಕಾಯಿ, ಹಾಗಲಕಾಯಿ, ಪಡವಲಕಾಯಿ, ತೊಂಡೆಕಾಯಿ, ಕುಂಬಳಕಾಯಿ, ಸೌತೆಕಾಯಿ, ಮೊಗ್ಗೆಕಾಯಿ, ಮುಂತಾದವುಗಳನ್ನು ಹೆಚ್ಚಾಗಿ ಬೆಳೆಯುತ್ತೇವೆ’ ಎನ್ನುತ್ತಾರೆ ರೈತ ಮಹಿಳೆ ಸಾವಿತ್ರಿ ಗೌಡ.

‘ಇಲ್ಲಿ ಬೆಳೆಯುವ ಹಸಿಮೆಣಸಿಗೆ ಹೆಚ್ಚು ಬೇಡಿಕೆ ಇದೆ. ಖಾರ ಕಡಿಮೆ ಇರುವುದರಿಂದ ಮಜ್ಜಿಗೆ ಮೆಣಸು ಸಿದ್ಧಪಡಿಸಲು ಇಷ್ಟಪಡುತ್ತಾರೆ. ಈ ಭಾಗದಲ್ಲಿ ಬೆಳೆಯುವ ಈರುಳ್ಳಿ ಹಾಗೂ ಗೆಣಸುಗಳಿಗೂ ಎಲ್ಲಿಲ್ಲದ ಬೇಡಿಕೆ ಇದೆ. ಈ ಎರಡು ಬೆಳೆ ದೂರದ ಮಹಾರಾಷ್ಟ್ರಕ್ಕೂ ಸಹ ಲಾರಿಗಟ್ಟಲೆ ಸಾಗಾಟವಾಗುತ್ತದೆ. ಈ ಭಾಗದಲ್ಲಿನ ಉಸುಕು ಮಿಶ್ರಿತ ಮಣ್ಣಿನ ಗದ್ದೆಯೇ ಹೀಗೆ ಬೆಳೆ ಬೆಳೆಯಲು ಕಾರಣ’ ಎಂದು ಅವರು ವಿವರಿಸಿದರು.

ಗೋದಾಮಿನ ಕೊರತೆ

‘ಗೋಕರ್ಣದಲ್ಲಿ ಗೋದಾಮಿನ ಕೊರತೆ ಇದೆ. ಬೀಜ, ರಸಗೊಬ್ಬರ ಸಂಗ್ರಹಿಸಿಡಲು ಸೂಕ್ತವಾದ ಸ್ಥಳದ ಅಭಾವವಿದ್ದು, ಕೃಷಿ ಯಂತ್ರಗಳನ್ನಿಡಲಂತೂ ಸ್ಥಳವೇ ಇಲ್ಲ. ಗೋಕರ್ಣ ಹೋಬಳಿಯಲ್ಲಿ ಬಹುತೇಕ ರೈತರು ತುಂಡು ಕೃಷಿ ಭೂಮಿಯ ಹಿಡುವಳಿದಾರರಾಗಿದ್ದಾರೆ. ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಕುಮಟಾ, ಕೂಜಳ್ಳಿ, ಮಿರ್ಜಾನ್ ಮತ್ತು ಗೋಕರ್ಣ ಹೋಬಳಿ ಸೇರಿ ಕೇವಲ ಇಬ್ಬರೇ ಕೃಷಿ ಅಧಿಕಾರಿ ಇದ್ದಾರೆ. ಉಳಿದವರೆಲ್ಲಾ ಹೊರ ಗುತ್ತಿಗೆ ನೌಕರರಾಗಿದ್ದಾರೆ. ಇದರಿಂದ ರೈತರು ಅವಶ್ಯಕ ಮಾಹಿತಿಯಿಂದ ವಂಚಿತರಾಗುತ್ತಿದ್ದಾರೆ’ ಎಂದು ರೈತರೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.