ಗೋಕರ್ಣ: ಇಲ್ಲಿಯ ಯಂಗ್ ಸ್ಟಾರ್ ಕ್ಲಬ್ ಅನೇಕ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದು, ಈ ವರ್ಷ 50ನೇ ವರ್ಷ ಆಚರಿಸುತ್ತಿದೆ. ಅದರ ಸಂಭ್ರಮದ ಮೊದಲ ಹೆಜ್ಜೆಯಾಗಿ ಊರಿನವರ ಸಹಕಾರದೊಂದಿಗೆ ಪುರಾಣ ಪ್ರಸಿದ್ಧ ಸಾವಿತ್ರಿ ಕೆರೆಯ ಹೂಳೆತ್ತಿ, ಜೀರ್ಣೋದ್ಧಾರ ಮಾಡುವ ಕಾರ್ಯಕ್ಕೆ ಮುಂದಾಗಿದೆ.

ಈ ನಿಟ್ಟಿನಲ್ಲಿ ಶುಕ್ರವಾರ ಕ್ಷೇತ್ರ ಗೋಕರ್ಣ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಚಂದ್ರಶೇಖರ ಅಡಿ ಮೂಳೆ ಭೂಮಿ ಪೂಜೆ ನಡೆಸುವುದರೊಂದಿಗೆ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದರು.

ಅಲ್ಲದೇ ₹1 ಲಕ್ಷ ರೂಪಾಯಿ ಧನ ಸಹಾಯ ಸಹ ನೀಡಿದರು.

ಈಗಾಗಲೇ ₹25 ಲಕ್ಷ ರೂಪಾಯಿ ವೆಚ್ಚದಲ್ಲಿ ಯಂಗ್ ಸ್ಟಾರ್ ಕ್ಲಬ್ ನೇತೃತ್ವದಲ್ಲಿ ಗಾಯತ್ರಿ ತೀರ್ಥವನ್ನು ಪುನರೋತ್ಥಾನಗೊಳಿಸಲಾಗಿದೆ.

ವೈಜ್ಞಾನಿಕವಾಗಿಯೂ ಈ ಎಲ್ಲಾ ಕೆರೆಗಳು ಶತಶೃಂಗ ಪರ್ವತದ ತಪ್ಪಲಿನಲ್ಲಿದ್ದು ಮಳೆ ಕೊಯ್ಲು, ಇಂಗು ಗುಂಡಿಗಳಾಗಿ ಕಾರ್ಯ ನಿರ್ವಹಿಸಿ ಕ್ಷೇತ್ರದ ಜಲ ಮರುಪೂರಣ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದವು. ಆದರೆ ನಮ್ಮ ಅಲಕ್ಷ ಅಸಡ್ಡೆಯಿಂದಾಗಿ ಈ ಕೆರೆಗಳು ಇಂದು ಸಂಪೂರ್ಣವಾಗಿ ಬತ್ತಿ ಹೂಳಿನಿಂದ ತುಂಬಿ ಹೋಗಿರುವುದು ದಿವ್ಯ ನಿರ್ಲಕ್ಷದ ಕುರುಹು ಆಗಿತ್ತು. ಆದರೆ ಈಗ ಸಾವಿತ್ರಿ ಕೆರೆಯ ಹೂಳೆತ್ತಲು ಮುಂದಾಗಿರುವುದು ಮೆಚ್ಚುಗೆಯ ಸಂಗತಿಯಾಗಿದೆ. ಜಲಕ್ಷಾಮದ ಇಂದಿನ ದಿನಗಳಲ್ಲಿ ಸಾವಿತ್ರಿ ದೇವಿಯ ಜೀವಜಲ ಮತ್ತೊಮ್ಮೆ ಆವಿರ್ಭವಿಸಲಿ ಎಂದು ಕ್ಷೇತ್ರ ಗೊಕರ್ಣ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಚಂದ್ರಶೇಖರ ಅಡಿ ಮೂಳೆ ಹೇಳಿದರು.

ಯಂಗ್ ಸ್ಟಾರ್ ಕ್ಲಬ್ಬಿನ ಸದಸ್ಯರಾದ ಶ್ರೀನಿಧಿ ಮೂಳೆ, ಸೀತಾರಾಮ ಹೊಸ್ಮನೆ, ಅಶೋಕ ಗೋಪಿ, ವಿನಾಯಕ ಉಪಧ್ಯಾಯ, ರವಿ ಜಂಭೆ, ನಾಗಕುಮಾರ ಗೋಪಿ, ಮಹೇಶ ಹಿರೇಗಂಗೆ, ಗಣೇಶ ಮೂಳೆ ಮುಂತಾದವರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-20-1524186592

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.