ಗೋಕರ್ಣ: ಉಪನಯನಕ್ಕೆಂದು ಬಂದಿದ್ದ ಇಬ್ಬರು ಮಹಿಳೆಯರ ₹10.50 ಲಕ್ಷ ಮೌಲ್ಯದ 87 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಗೋಕರ್ಣ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.

ಅಂಕೋಲಾ ತಾಲ್ಲೂಕಿನ ಹಿಲ್ಲೂರಿನ ತಿಂಗಳಬೈಲ್ ನಿವಾಸಿ ಶ್ರೀದೇವಿ ಅನಂತ ಹೆಬ್ಬಾರ್ ಮತ್ತು ಶೇವಕಾರಿನ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಪ್ರೇಮಾ ರಮೇಶ ಹೆಬ್ಬಾರ್ ಚಿನ್ನ ಕಳೆದುಕೊಂಡವರು.

ಶುಕ್ರವಾರ ನಡೆದ ಗೋಕರ್ಣದ ರಥಬೀದಿಯಲ್ಲಿರುವ ವಿದ್ಯಾ ಮಹಾಬಲೇಶ್ವರ ತಾಮ್ರಗೌರಿ ಅವರು ಮೊಮ್ಮಗನ ಉಪನಯನಕ್ಕೆ ಬಂದಿದ್ದರು. ಶುಕ್ರವಾರ ರಾತ್ರಿ ಎಲ್ಲಾ ಆಭರಣಗಳನ್ನೂ ತೆಗೆದು ಕೋಣೆೆಯಲ್ಲಿಟ್ಟು ಮಲಗಿದ್ದರು. ಕಳ್ಳರು ಪಕ್ಕದ ಮನೆಯ ಶೌಚಾಲಯದ ಗೋಡೆಯ ಮೂಲಕ ಒಳ ಪ್ರವೇಶಿಸಿ ಮನೆಯ ಹಾಲ್ ನಲ್ಲಿದ್ದ ಚಾವಿಯನ್ನು ಬಳಸಿ ಕೋಣೆೆಯ ಬೀಗ ತೆಗೆದು ಒಳ ಪ್ರವೇಶಿಸಿ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-20-1492495114

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.