ಕಾರವಾರ: ಮುಂಬರುವ ಜೂನ್ ವೇಳೆಗೆ ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯತ್ವಕ್ಕೆ ಆಯ್ಕೆಯಾಗಲು ನಡೆಯಲಿರುವ ಚುನಾವಣೆಗೆ ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಆರಂಭಗೊಂಡಿದೆ. 24 ದಿನ ಕಳೆದರೂ ಕೇವಲ 587 ಮತದಾರರಷ್ಟೇ ಜಿಲ್ಲೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಅ.1 ರಿಂದ ಹೆಸರು ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ನ. 6 ಕೊನೆಯ ದಿನವಾಗಿದೆ. ನಿಗದಿತ ನಮೂನೆ ಭರ್ತಿ ಮಾಡಿ ಅದರೊಂದಿಗೆ ಆಯಾ ತಹಶೀಲ್ದಾರ್ ಕಚೇರಿಗಳಲ್ಲಿ ಅಗತ್ಯ ದಾಖಲೆ ಸಲ್ಲಿಸಿ ಹೆಸರು ಸೇರ್ಪಡೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.

2021–2022ರ ಶೈಕ್ಷಣಿಕ ವರ್ಷ ಅಥವಾ ಅದಕ್ಕೆ ಮುನ್ನ ಪದವಿ ಪಡೆದ, ಜಿಲ್ಲೆಯ ವ್ಯಾಪ್ತಿಯಲ್ಲಿರುವ ಪದವೀಧರರೆಲ್ಲ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಮತದಾರರಾಗಲು ಅರ್ಹತೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಇಂತಹ 2 ಲಕ್ಷಕ್ಕೂ ಹೆಚ್ಚು ಪದವೀಧರರಿದ್ದರೂ, ಈವರೆಗೆ ಕೆಲವೇ ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

‘ಪದವೀಧರ ಮತದಾರರ ಪಟ್ಟಿ ಪ್ರತಿ ಐದು ವರ್ಷಕ್ಕೊಮ್ಮೆ ಹೊಸದಾಗಿ ರಚನೆಯಾಗುತ್ತದೆ. ಪ್ರತಿ ಐದು ವರ್ಷಕ್ಕೊಮ್ಮೆ ಹೆಸರು ನೋಂದಾಯಿಸಿಕೊಳ್ಳಬೇಕಿರುವ ನಿಯಮಾವಳಿಯೇ ಮತದಾರರು ಹೆಸರು ಸೇರ್ಪಡೆಗೆ ನಿರುತ್ಸಾಹ ತೋರಲು ಕಾರಣ’ ಎಂದು ರಾಜಕೀಯ ಮುಖಂಡರೊಬ್ಬರು ಹೇಳುತ್ತಾರೆ.

‘ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ನಿಗದಿಪಡಿಸಿದ ನಮೂನೆ ಭರ್ತಿ ಮಾಡಿ, ದಾಖಲೆ ಸಹಿತ ಅರ್ಜಿ ಸಲ್ಲಿಸಲು ತಹಶೀಲ್ದಾರ್ ಕಚೇರಿಗೆ ಬಂದವರ ಸಂಖ್ಯೆ ತೀರಾ ವಿರಳ. ನೋಂದಣಿ ಆರಂಭಗೊಂಡು 15 ದಿನ ಕಳೆದರೂ ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ನೋಂದಣಿ ನಡೆದಿದೆ. ಅ. 15ರ ಬಳಿಕ ನೋಂದಣಿ ಪ್ರಮಾಣ ಹೆಚ್ಚಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಪದವೀಧರರ ಪೈಕಿ ಹೊರ ಜಿಲ್ಲೆ, ಮಹಾನಗರಗಳಲ್ಲಿ ಉದ್ಯೋಗದಲ್ಲಿರುವವರ ಸಂಖ್ಯೆಯೇ ಹೆಚ್ಚಿದೆ. ದೀಪಾವಳಿ ಆಚರಣೆಗೆ ಊರಿಗೆ ಮರಳಿದ ಹಲವರು ದಾಖಲೆ ನೀಡಿ ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿ ಬಾರಿ ರಾಜಕೀಯ ಪಕ್ಷಗಳ ಮುಖಂಡರು ಗ್ರಾಮಗಳಲ್ಲಿ ಸುತ್ತಾಟ ನಡೆಸಿ, ಪದವೀಧರರ ಮನವೊಲಿಸಿ ಹೆಸರು ಸೇರ್ಪಡೆಗೆ ಮುಂದಾಗುತ್ತಿದ್ದರು. ಈ ಬಾರಿ ಅಂತಹ ಮುಖಂಡರೂ ಕಚೇರಿಯತ್ತ ಸುಳಿದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.