ಶಿರಸಿ: ಇತಿಹಾಸ ಪ್ರಸಿದ್ಧ ಕ್ಷೇತ್ರ ಗುಡ್ನಾಪುರದ ಬಂಗಾರೇಶ್ವರ ದೇವರ ಜಾತ್ರಾ ಮಹೋತ್ಸವವು ಫೆ.14 ರಿಂದ 21ರವರೆಗೆ ಜರುಗಲಿದೆ. ಈ ಉತ್ಸವದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿತವಾಗಿವೆ.

ಫೆ.15ರಂದು ಮಹಾಶಿವರಾತ್ರಿ ನಿಮಿತ್ತ ರುದ್ರಾಭಿಷೇಕ, ಜಾಗರಣೆ ಹಾಗೂ ಭಕ್ತರಿಗೆ ಬಿಲ್ವಾರ್ಚನೆಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಫೆ.17ರ ರಾತ್ರಿ 11.54ಕ್ಕೆ ವೈಭವದ ರಥೋತ್ಸವ ನಡೆಯಲಿದೆ. ಫೆ.20ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಜರುಗಲಿದ್ದು, ಅಂದು ಸಾಯಂಕಾಲ ಗುಡ್ನಾಪುರ ಕೆರೆಯಲ್ಲಿ ತೆಪ್ಪೋತ್ಸವ (ನೌಕೋತ್ಸವ) ನಡೆಯಲಿದೆ. ಫೆ.21ರಂದು ಓಕುಳಿ ಮತ್ತು ಅವಭೃತ ವಿಸರ್ಜನೆಯೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ. ಎಂಟು ದಿನಗಳ ಕಾಲ ನಡೆಯುವ ಸಂಭ್ರಮದಲ್ಲಿ ಭಕ್ತಾದಿಗಳು ಕುಟುಂಬ ಸಮೇತ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಬಂಗಾರೇಶ್ವರ ಸೇವಾ ಅಭಿವೃದ್ಧಿ ಟ್ರಸ್ಟ್ ಪ್ರಕಟಣೆಯಲ್ಲಿ ವಿನಂತಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.