ಮುಂಡಗೋಡ: ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರ ಸೇವಾ ಹಿರಿತನ ಹಾಗೂ ಅನುಭವ ಪರಿಗಣಿಸಿ, ಪ್ರತಿ ವರ್ಷದ ಶೈಕ್ಷಣಿಕ ಅವಧಿಗೆ ಅವರನ್ನೇ ಮರು ನೇಮಕ ಮಾಡಿಕೊಳ್ಳಬೇಕು ಎಂದು ಅತಿಥಿ ಶಿಕ್ಷಕರ ತಾಲ್ಲೂಕು ಘಟಕದ ಸದಸ್ಯರು ಪತ್ರ ಚಳವಳಿ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು.