ಹಳಿಯಾಳ: ‘ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು’ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಟ್ಟಣದಲ್ಲಿ ₹3.37 ಕೋಟಿ ವೆಚ್ಚದಲ್ಲಿ ಪಟ್ಟಣದ ರಸ್ತೆಯ ಉದ್ದಕ್ಕೂ ಆಲಂಕಾರಿಕ ದೀಪಗಳನ್ನು ಅಳವಡಿಸಲಾಗುವುದು. ವಿ.ಆರ್. ದೇಶಪಾಂಡೆ ರಸ್ತೆಯಿಂದ ವಿ.ಡಿ.ಐ.ಟಿ. ಎಂಜಿನಿಯರಿಂಗ್ ಕಾಲೇಜಿನಿಂದ ಧಾರವಾಡ ರಸ್ತೆಯಲ್ಲಿರುವ ಸಮಾವೇಶ ಕೇಂದ್ರದ ವರೆಗೆ ಹಾಗೂ ಬಸವೇಶ್ವರ ವೃತ್ತದಿಂದ ಚನ್ನಮ್ಮ ವೃತ್ತ ಮೂಲಕ ಆನೆಗುಂದಿ ಪ್ಲಾಟ್ ಕ್ರಾಸ್ ವರೆಗೆ, ಚನ್ನಮ್ಮ ವೃತ್ತದಿಂದ ಬಸ್ ನಿಲ್ದಾಣ ರಸ್ತೆಯವರೆಗೆ ದೀಪ ಅಳವಡಿಸಲಾಗುವುದು’ ಎಂದರು.

‘ಖೇಲೋ ಇಂಡಿಯಾ ಒಳಾಂಗಣ ಕೀಡಾಂಗಣಕ್ಕೆ ಈಗಾಗಲೇ ₹7.50 ಕೋಟಿ ಕೇಂದ್ರ ಸರ್ಕಾರದಿಂದ ಮಂಜೂರಾಗಿದ್ದು, ಹೆಚ್ಚುವರಿಯಾಗಿ ಕಾಮಗಾರಿ ಪೂರ್ತಿ ಗೊಳಿಸಲು ಯುವ ಮತ್ತು ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ₹2.48 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಇದರಿಂದ ಮೂಲ ಸೌಕರ್ಯ ಅಭಿವೃದ್ಧಿ ಪೂರ್ಣಗೊಂಡು ಕ್ರೀಡಾಂಗಣ ಬಳಕೆಗೆ ಸಿದ್ದವಾಗಲಿದೆ’ ಎಂದರು.

ಪಟ್ಟಣದ ಸರ್ಕಾರಿ ಉರ್ದು ಬಾಲಕಿಯರ ಶಾಲೆಗೆ ಅಗತ್ಯ ಜಾಗವನ್ನು ಲೀಸ್ ಮೇಲೆ ಪಡೆಯಲು ₹43.50 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ. ತಾಲ್ಲೂಕಿನ ಹಿರಿಯ ಕುಸ್ತಿ ಪಟುಗಳಿಗೆ ರಾಜ್ಯ ಬಜೆಟ್ ನಲ್ಲಿ ಕುಸ್ತಿ ಮಾಸಾಶನ ಯೋಜನೆಯಡಿ ರಾಜ್ಯದ ಕುಸ್ತಿ ಪಟುಗಳಿಗೆ ಈಗಿರುವ ₹3,500 ಪಡೆಯುತ್ತಿದ್ದು, ₹4,500 ಮಾಡಲಾಗಿದೆ. ರಾಷ್ಟ್ರಮಟ್ಟದ ಕುಸ್ತಿ ಪಟುಗಳಿಗೆ ಈಗಿರುವ ₹4,000 ಬದಲಾಗಿ ₹5,000 ಮಾಡಲಾಗಿದ್ದು, ಇದರಿಂದ ತಾಲ್ಲೂಕಿನಲ್ಲಿ ಸುಮಾರು 52 ಜನರು ಹಿರಿಯ ಕುಸ್ತಿ ಪಟುಗಳು ಮಾಸಾಶನದ ಲಾಭ ಪಡೆಯುತ್ತಾರೆ ಎಂದರು.

ಹಳೇ ದಾಂಡೇಲಿಯ ಸರ್ಕಾರಿ ಪೂರ್ವ ವಿಶ್ವವಿದ್ಯಾಲಯ ಕಾಲೇಜಿಗೆ ಪಿಎಂಶ್ರೀ ಯೋಜನೆಯಡಿ ಕಾಲೇಜಿನ ಕಟ್ಟಡ ಹಾಗೂ ಪ್ರಯೋಗಾಲಯಗಳ ನವೀಕರಣ ಸೇರಿದಂತೆ ಅಭಿವೃದ್ಧಿಗೆ ಅನುದಾನ ನೀಡಲಾಗುವುದು. ವಿಡಿಪಿ ಯೋಜನೆಯಡಿ ಅಂಜುಮನ್ ಸಂಸ್ಥೆ ದಾಂಡೇಲಿಗೆ ₹30 ಲಕ್ಷ ಆಂಬ್ಯುಲೆನ್ಸ್ ಖರೀದಿಸಲು ಮಂಜೂರು ಮಾಡಲಾಗಿದೆ ಎಂದರು.

ಕಬ್ಬು ಬೆಳೆಗಾರರಿಗೆ ಈಗಾಗಲೇ ಸರ್ಕಾರದಿಂದ ಹೆಚ್ಚುವರಿಯಾಗಿ ₹50 ಹಾಗೂ ಕಾರ್ಖಾನೆಯಿಂದ ₹50 ಪ್ರತಿ ಟನ್ ಗೆ ಹಣ ಬಿಡುಗಡೆ ಮಾಡಲಾಗಿದ್ದು, ಸರ್ಕಾರ ಹಾಗೂ ಸ್ಥಳೀಯ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯಿಂದ ಒಟ್ಟೂ ₹11.14 ಕೋಟಿ ನೇರವಾಗಿ ಕಬ್ಬು ಬೆಳೆಗಾರರ ಖಾತೆಗೆ ಜಮೆ ಮಾಡಲಾಗುತ್ತಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಪಾಟೀಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-20-1818500855

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.