ಹಳಿಯಾಳ: ಈದ್-ಉಲ್ ಫಿತ್ರ್ ತಿಂಗಳಿನಲ್ಲಿ ಉಪವಾಸ ವ್ರತದಲ್ಲಿ ಕಾಪಾಡಿಕೊಂಡಿದ್ದ ದೇವಭಯ, ಸತ್ಯನಿಷ್ಠೆ, ಪ್ರಾಮಾಣಿಕತೆ, ನೈತಿಕತೆ, ಮಾನವೀಯತೆ, ಸಜ್ಜನಿಕೆ ಮಾನವನಲ್ಲಿ ಸದಾ ಮುಂದುವರೆದಲ್ಲಿ ಮಾನವನು ಪುಣ್ಯ ಗಳಿಸಲು ಸಾಧ್ಯವಾಗುತ್ತದೆ ಎಂದು ಮುಪ್ತಿ ಫಯಾಜ್ ಅಹ್ಮದ್ ಇಟ್ಟಂಗಿವಾಲೆ ಹೇಳಿದರು.

ಈದ್-ಉಲ್ ಫಿತ್ರ್ (ರಂಜಾನ್) ಹಬ್ಬದ ಅಂಗವಾಗಿ ಇಲ್ಲಿನ ಮರಡಿ ಗುಡ್ಡದಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ನಂತರ ಮಾತನಾಡಿದ ಅವರು, ದೇಶದಲ್ಲಿ ಒಳ್ಳೆಯ ಮಳೆ, ಬೆಳೆ ಬೆಳೆಯಲಿ, ರಾಷ್ಟ್ರದ ಜನರು ಒಗ್ಗಟ್ಟಿನಿಂದ ಸಾಗಿ ರಾಷ್ಟ್ರದ ಅಭಿವೃದ್ಧಿಗಾಗಿ ಪಣತೊಡೋಣ. ವೈಯಕ್ತಿಕ ಸಾಮರಸ್ಯ ತೊಲಗಿಸಿ ಒಂದಾಗಿ ಬಾಳೋಣ. ಉಪವಾಸದಿಂದ ಅನೇಕ ಪ್ರಯೋಜನೆಗಳು ಮಾನವನಲ್ಲಿ ಹೊಂದಿದ್ದು, ತಾಳ್ಮೆ, ಸೈರಣೆ, ಆಧ್ಯಾತ್ಮಿಕತೆ, ಸತ್ಕರ್ಮದಂತಹ ಅನೇಕ ಗುಣವಿಶೇಷಗಳನ್ನು ಬೆಳೆಸುತ್ತದೆ ಎಂದರು.

ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ಇಸ್ಲಾಂ ಧರ್ಮದಂತೆ ಪ್ರತಿಯೊಬ್ವರೂ ತನ್ನ ನಡತೆ ಮತ್ತು ಚಾರಿತ್ರ್ಯದಿಂದ ಧರ್ಮದ ಸತ್ಯತೆಯನ್ನು ಸಮಾಜಕ್ಕೆ ತೋರಿಸಬೇಕು. ದೇಶದಲ್ಲಿ ಸಹಬಾಳ್ವೆ ಮತ್ತು ಸೌಹಾರ್ದ ಕಾಪಾಡುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಹೊತ್ತುಕೊಳ್ಳಬೇಕು. ದೇಶದ ಸರ್ವಾಂಗೀಣ ಅಭಿವೃದ್ಧಿ ನಿಟ್ಟಿನಲ್ಲಿ ಸಾಗೋಣ ಎಂದರು.

ಮುಪ್ತಿ ಮುಸ್ತಾಕ ಅಹ್ಮದ ನಮಾಜ್ ಬೋಧಿಸಿದರು. ಅಂಜುಮನ್ ಸಂಸ್ಥೆಯ ಪ್ರಭಾರ ಆಡಳಿತಾಧಿಕಾರಿ ಮಹಮ್ಮದ ಖಯಾಮ ಮುಗದ ಮಾತನಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-20-1880443606

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.