ಹಳಿಯಾಳ: ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಹಿಜಾಬ್ಗೆ ಅವಕಾಶ ನೀಡಲಾಗಿದ್ದನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಹಿಂದೂರಾಷ್ಟ್ರ ಸಮನ್ವ ಸಮಿತಿಯಿಂದ ಬುಧವಾರ ಗ್ರೇಡ್ -2 ತಹಶೀಲ್ದಾರ್ ರವೀಂದ್ರ ನೇಸರ್ಗಿ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಸರ್ಕಾರ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿ, ಅದೇ ಸಂದರ್ಭದಲ್ಲಿ ಕೇಸರಿ ಶಾಲು ಧರಿಸುವುದಕ್ಕೆ ನಿರ್ಬಂಧ ವಿಧಿಸಿರುವ ನಿರ್ಧಾರ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಶೈಕ್ಷಣಿಕ ಸಂಸ್ಥೆಗಳು ಜ್ಞಾನ, ಶಿಸ್ತು ಮತ್ತು ರಾಷ್ಟ್ರೀಯ ಏಕತೆ ಬೆಳೆಸುವ ಕೇಂದ್ರಗಳಾಗಬೇಕು. ಆದರೆ ಧಾರ್ಮಿಕ ಗುರುತುಗಳಿಗೆ ಪ್ರತ್ಯೇಕ ಅವಕಾಶ ನೀಡುವುದರಿಂದ ವಿದ್ಯಾರ್ಥಿಗಳಲ್ಲಿ ಧರ್ಮ ಆಧಾರಿತ ವಿಭಜನೆ, ಗುಂಪುಗಾರಿಕೆ ಹಾಗೂ ತಾರತಮ್ಯ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಸಮಿತಿಯ ಸದಸ್ಯರು ಹೇಳಿದರು.

‘ಹಿಜಾಬ್ಗೆ ಅವಕಾಶ ನೀಡುವ ಆದೇಶ ತಕ್ಷಣ ಹಿಂಪಡೆಯಬೇಕು. ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಏಕರೂಪದ ಸಮವಸ್ತ್ರ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಯಾವುದೇ ಧಾರ್ಮಿಕ ಚಿಹ್ನೆ, ಶಾಲು ಅಥವಾ ಪ್ರತ್ಯೇಕ ಧಾರ್ಮಿಕ ಉಡುಪುಗಳಿಗೆ ಅವಕಾಶ ನೀಡಬಾರದು’ ಎಂದರು.

ಹಿಂದೂರಾಷ್ಟ್ರ ಸಮನ್ವ ಸಮಿತಿಯ ಮಹಾದೇವ ಸಾಗರೆಕರ, ವಿಠೋಬಾ ಮಾಲ್ಸೆಕರ, ಗಜಾನನ ಪಾಲಕರ, ಶಿವಾನಂದ ಶೆಟ್ಟರ, ರಾಘವೇಂದ್ರ ಛಲವಾದಿ, ಅಭಿನಂದನ ಮಸೂರಕರ, ಶಂಕರ ರೇಣಕೆ, ವಿನೋದ ಗಿಂಡೆ, ಮಂಜುನಾಥ ಘಾಡಿ, ಜಿ.ಡಿ.. ಗಂಗಾಧರ, ಎಸ್.ಎಸ್. ಗೋಕಾವಿ, ರಾಜು ವಿ, ವಿ.ಕೆ.ಸಾವಂತ್, ಆರ್. ಬಿ.ಛಲವಾದಿ, ಸದಾನಂದ ಬಾಳೆಕುಂದ್ರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-20-2108310761

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.