ಹಳಿಯಾಳ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ವತಿಯಿಂದ ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಅಂತರರಾಷ್ಟ್ರೀಯ ನರ್ಸ್ (ದಾದಿಯರ) ದಿನಾಚರಣೆ ಇತ್ತೀಚಿಗೆ ಆಚರಿಸಲಾಯಿತು.

ಡಾ.ಶ್ರೀಶೈಲ ಮಾದನ್ನವರ ಮಾತನಾಡಿ, ನರ್ಸ್ (ದಾದಿಯರು) ಆರೋಗ್ಯ ಸೇವೆ ಬಲಪಡಿಸುವಲ್ಲಿ ನೀಡುತ್ತಿರುವ ನಿಸ್ವಾರ್ಥ ಸೇವೆ ಶ್ಲಾಘನೀಯ ಎಂದರು.

ಮೇಲ್ವಿಚಾರಕಿ ತೇಜಸ್ವಿನಿ ಮಾತನಾಡಿ, ರೋಗಿಗಳ ಆರೈಕೆಯಲ್ಲಿ ನರ್ಸ್ ಸೇವೆಯ ಮಹತ್ವವನ್ನು ವಿವರಿಸಿ, ಅವರ ಸೇವೆಯನ್ನು ಗುರುತಿಸಿ ಗೌರವಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದರು.

ಸಿಬಿಡಿ ಆರ್ಸೆಟಿಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ ಮಾತನಾಡಿ, ಸಮಾಜ ಮತ್ತು ರೋಗಿಗಳ ಆರೈಕೆಯಲ್ಲಿ ದಾದಿಯರು ನೀಡುತ್ತಿರುವ ಸಮರ್ಪಿತ ಸೇವೆಯನ್ನು ಗೌರವಿಸಿ ಅಭಿನಂದಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಯಿತು ಎಂದರು.

ಅಂತರರಾಷ್ಟ್ರೀಯ ನರ್ಸ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು. ಕ್ಷೇತ್ರ ಮೇಲ್ವಿಚಾರಕ, ಸಂತೋಷ ಸಿದ್ನೆಕೊಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-20-758434559

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.