ಹಳಿಯಾಳ: ಇಲ್ಲಿನ ತಿಲಕ ರಸ್ತೆಯಲ್ಲಿರುವ ಪರಮಾತ್ಮನಿಕೇತನ ಶ್ರೀ ಹರಿ ಮಂದಿರದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಈಶ್ವರ ಮಂದಿರದಲ್ಲಿ ಈಶ್ವರ ದೇವರ ಪ್ರತಿಷ್ಠಾಪನೆ ಕಾರ್ಯಕ್ರಮ ಶೃದ್ಧಾ–ಭಕ್ತಿಯಿಂದ ನಡೆಯಿತು.

ಗಣಪತಿ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಕಳಶ ಪೂಜೆ, ಕಲಾವೃದ್ಧಿ ಹವನ, ಪೂರ್ಣಾಹುತಿ, ದೇವತಾ ಸ್ಥಾಪನೆ, ಈಶ್ವರ ಗಣಪತಿ ನಂದೀಶ್ವರರ ಪೂಜೆ ನಡೆಯಿತು.

ಶಾಸಕ ಆರ್.ವಿ. ದೇಶಪಾಂಡೆ, ವಿಕಾಸ ಕಾನೇಟಕರ ಹಾಗೂ ಕುಟುಂಬಸ್ಥರು, ಕಲಾವತಿ ಹರಿ ಮಂದಿರದ ಭಕ್ತರು ಪಾಲ್ಗೊಂಡಿದ್ದರು. ಮಧ್ಯಾಹ್ನ ಪ್ರಸಾದ ವಿತರಣೆ ನಡೆಯಿತು.

ಪ್ರಧಾನ ಅರ್ಚಕರಾದ ಉದಯ ಹರ್ಷಲಕರ ನೇತೃತ್ವದಲ್ಲಿ ಮೋಹನ ಭಟ್, ಮರಾಠೆ, ರಾಮಚಂದ್ರ ಭಟ, ಪ್ರಶಾಂತ ಜೋಶಿ, ಅಚ್ಯುತ ಪಾಠಕ, ರಮೇಶ ಪುರೋಹಿತ ಪೂಜಾ ವಿಧಿ ವಿಧಾನ ನೆರವೇರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-20-934511051

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.