ಹಳಿಯಾಳ: ‘ಸದ್ಗುಣ ಸಂಪನ್ನ ನಡವಳಿಕೆಯಿಂದ ಮಾತ್ರ ಮಾನವನ ಪಾಪಗಳನ್ನು ತಪ್ಪಿಸಲು ಸಾಧ್ಯ. ಭಗವಾನ್ ಮಹಾವೀರರ ಅಹಿಂಸಾ ಧರ್ಮದ ಸಿದ್ಧಾಂತವನ್ನು ಪಾಲಿಸಬೇಕು’ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ತಾಲ್ಲೂಕು ಆಡಳಿತದಿಂದ ಸೋಮವಾರ ಆಯೋಜಿಸಿದ್ದ ಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮನುಷ್ಯನು ಜೀವನದ ಪರಮ ಸತ್ಯವನ್ನು ಅರಿತುಕೊಳ್ಳಬೇಕು. ಅದರ ಸಾಕ್ಷಾತ್ಕಾರಕ್ಕಾಗಿ ತಪಸ್ಸು, ನೈತಿಕತೆ, ಶುದ್ಧತೆ, ಸದ್ಗುಣಗಳಿಂದ ಜೀವನ ನಡೆಸಬೇಕು ಎಂದು ಮಹಾವೀರರು ಸಂದೇಶ ಸಾರಿದ್ದಾರೆ. ಎಲ್ಲ ಜೀವಿಗಳ ನಡುವೆ ಪರಸ್ಪರ ಸಹಕಾರ, ಸಹಬಾಳ್ವೆ ತಿಳಿಸಿದ ಮಹಾವೀರರ ಜೀವನವು ಬೋಧನೆಗೆ ಸೀಮಿತವಾಗಿರಲಿಲ್ಲ, ಸ್ವಯಂ ಸಾಕ್ಷಾತ್ಕಾರಗೊಂಡ ಸತ್ಯವಾಗಿತ್ತು’ ಎಂದರು.

ಜೈನ ಸಮುದಾಯದ ಗೌರವ ಅಧ್ಯಕ್ಷ ಧರಣೇಂದ್ರ ಶಾಸ್ತ್ರಿ ಮಾತನಾಡಿದರು. ತಹಶೀಲ್ದಾರ್ ಫಿರೋಜಷಾ ಸೋಮನಕಟ್ಟಿ, ಸಿ.ಪಿ.ಐ. ಜಯಪಾಲ ಪಾಟೀಲ, ಬಸವಂತ ಲಕ್ಕನಗೌಡರ, ಪೂಜಾ ಧೂಳಿ, ರಮೇಶ ಪಾಟೀಲ, ಶ್ರಾವಕ– ಶ್ರಾವಕಿಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-20-666455665

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.