ಹಳಿಯಾಳ: ಪರಿಸರ ಸ್ನೇಹಿ, ಹಸಿರು ಶಕ್ತಿ, ಜಲ ಸಂರಕ್ಷಣೆ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಇಲ್ಲಿನ ಕೆಎಲ್ಎಸ್ ವಿಡಿಐಟಿ ಮಹಾ ವಿದ್ಯಾಲಯಕ್ಕೆ ಪ್ಲಾಟಿನಂ ಸುಸ್ಥಿರ ಕ್ಯಾಂಪಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ರಿಸರ್ಚ್ ಹೈಟ್ ಫೌಂಡೇಶನ್ (ಆರ್ಎಚ್ಎಫ್ ) ಮತ್ತು ಪರಿಸರ ಸಂರಕ್ಷಣಾ ತರಬೇತಿ ಮತ್ತು ಸಂಶೋಧನಾ ಸಂಸ್ಥೆ (ಇಪಿಟಿಆರ್ಐ ) ಜೂನ್ 1 ರಂದು ಹೈದರಾಬಾದ್ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಹಾವಿದ್ಯಾಲಯದ ಪರವಾಗಿ ಪ್ರೊ.ರಾಕೇಶ್ ಪಾಟೀಲ್ ಪುರಸ್ಕಾರ ಸ್ವೀಕರಿಸಿದರು.

ಭಾರತ ಸಸ್ಟೆನೇಬಲ್ ಕ್ಯಾಂಪಸ್ ಮಿಷನ್ 2026 ಅಡಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹಾವಿದ್ಯಾಲಯವು ಪರಿಸರ ಸಂರಕ್ಷಣೆಗೆ ಕೈಗೊಂಡಿರುವ ಉಪಕ್ರಮಗಳಾದ ವನಮಹೋತ್ಸವ, ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್, ತ್ಯಾಜ್ಯ ನಿರ್ವಹಣೆ, ಹಸಿರು ಪರಿಸರ ನಿರ್ಮಾಣ, ಮಳೆ ಕೊಯ್ಲು ಮುಂತಾದವುಗಳನ್ನು ಗುರುತಿಸಿ ಈ ಪುರಸ್ಕಾರ ನೀಡಲಾಗಿದೆ.

ವಿವಿಧ ರಾಜ್ಯಗಳ 321 ಕಾಲೇಜುಗಳಿಗೆ ಪ್ರಶಸ್ತಿ ನೀಡಲಾಗಿದೆ. ಕರ್ನಾಟಕದಿಂದ ಪ್ರಶಸ್ತಿ ಪಡೆದ 28 ಕಾಲೇಜುಗಳಲ್ಲಿ ಕೇವಲ 14 ಕಾಲೇಜುಗಳು 7ಕ್ಕೂ ಅಧಿಕ ಚಟುವಟಿಕೆ ಹಮ್ಮಿಕೊಂಡಿದ್ದು ಇದರಲ್ಲಿ ವಿಡಿಐಟಿ ಒಂದಾಗಿದೆ. ಮಹಾವಿದ್ಯಾಲಯಕ್ಕೆ ರಾಷ್ಟ್ರೀಯ ಪುರಸ್ಕಾರ ದೊರೆತಿರುವುದಕ್ಕೆ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಶಾಂತ್ ಕುಲಕರ್ಣಿ ಮತ್ತು ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ಸಂತಸ ವ್ಯಕ್ತಪಡಿಸಿದ್ದಾರೆ.

ಶಕ್ತಿ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆಯ ಕುರಿತಾಗಿ ಇಕೋ ಕ್ಲಬ್ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು, ಇದರ ಫಲವಾಗಿ ಮಹಾವಿದ್ಯಾಲಯ ಪುರಸ್ಕಾರಕ್ಕೆ ಭಾಜನವಾಗಿರುವುದು ಹರ್ಷ ತಂದಿದೆ ಎಂದು ಇಕೋ ಕ್ಲಬ್ ಸದಸ್ಯರಾದ ಸ್ನೇಹಾ ಕುಲಕರ್ಣಿ, ಪ್ರೊ. ರೋಹಿಣಿ ಕಲ್ಲೂರ್, ಪ್ರೊ.ಸುನೀತಾ ಕಲ್ಲು, ಪ್ರೊ ನವೀನ ಹಿರೇಮಠ, ಪ್ರೊ.ಅಮರನಾಥ ಸ್ವಾಮಿ, ಜಿ.ಎಸ್.ಯಳ್ಳೂರ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-20-304794246

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.