ಕಾರವಾರ: ಆಸ್ತಿಯಲ್ಲಿ ಪಾಲು ಕೇಳಿದ ಕಾರಣಕ್ಕೆ ಮೊದಲ ಪತ್ನಿಯ ಮಗನನ್ನು ಹತ್ಯೆಗೈದಿದ್ದ ಆತನ ತಂದೆ, ಮಲತಾಯಿ ಮತ್ತು ಸಹೋದರನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಯಲ್ಲಾಪುರ ಪೀಠಾಸೀನ 1ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಹಳಿಯಾಳ ತಾಲ್ಲೂಕಿನ ಬಿದ್ರೊಳ್ಳಿ ಗ್ರಾಮದಲ್ಲಿ 2019ರ ಸೆ.3ರಂದು ಕೇಶವ ಕಿತ್ತೂರಕರ ಎಂಬುವವರನ್ನು ಹತ್ಯೆಗೈಯಲಾಗಿತ್ತು. ಕೇಶವ ಅವರನ್ನು ಹತ್ಯೆಗೈದಿದ್ದ ಅವರ ಮಲತಾಯಿಯ ಪುತ್ರ ಅಕ್ಷಯ ಯಾನೆ ಆಕಾಶ ಕಿತ್ತೂರಕರ, ತಂದೆ ಪಾಂಡುರಂಗ ಕಿತ್ತೂರಕರ ಮತ್ತು ಮಲತಾಯಿ ಲತಾ ಯಾನೆ ತುಳುಸಾಯಿ ಕಿತ್ತೂರಕರ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಜೊತೆಗೆ ಮೂವರು ಅಪರಾಧಿಗಳು ತಲಾ ₹25 ಸಾವಿರ ದಂಡ ಪಾವತಿಸಲು ಆದೇಶಿಸಲಾಗಿದೆ. ಪ್ರಕರಣದಲ್ಲಿ ಆರೋಪಿಗಳಾಗಿದ್ದ ಗಣಪತಿ ಕಿತ್ತೂರಕರ ಮತ್ತು ಲಕ್ಷ್ಮಣ ಕಿತ್ತೂರಕರ ಅವರನ್ನು ಸಾಕ್ಷ್ಯಗಳ ಕೊರತೆಯ ಕಾರಣದಿಂದ ಖುಲಾಸೆಗೊಳಿಸಲಾಗಿದೆ.

ಪಾಂಡುರಂಗ ಅವರ ಆಸ್ತಿಯಲ್ಲಿ ಅವರ ಮೊದಲ ಪತ್ನಿಯ ಮಗನಾದ ಕೇಶವ ಪಾಲು ಕೇಳಿದ ಕಾರಣಕ್ಕೆ ನೇಣು ಹಾಕಿ ಹತ್ಯೆ ಮಾಡಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-26-129129170

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.