ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಕರ್ನಾಟಕ ಕುಸ್ತಿ ತಂಡದ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಿದ ಕ್ರೀಡಾ ವಸತಿ ನಿಲಯದ ರೋಹನ್ ದೊಡ್ಡಮನಿ 61 ಕೆ.ಜಿ. ವಿಭಾಗ, ಭಗವತಿ 72 ಕೆ.ಜಿ.ವಿಭಾಗ, ಶಾಲಿನಿ ಸಿದ್ದಿ 57 ಕೆ.ಜಿ.ವಿಭಾಗ, ಗಾಯತ್ರಿ ಸುತಾರ 59 ಕೆ.ಜಿ.ವಿಭಾಗ, ಪ್ರಿನ್ಸಿಟಾ ಸಿದ್ದಿ 65 ಕೆ.ಜಿ.ವಿಭಾಗ, ಶ್ವೇತಾ ಅನ್ನಕೇರಿ 50 ಕೆ.ಜಿ. ವಿಭಾಗ ಹಾಗೂ ಖೇಲೋ ಇಂಡಿಯಾ ಸೆಂಟರ್ ನಿಂದ ಸುಜಾತಾ ಪಾಟೀಲ 68 ಕೆ.ಜಿ.ವಿಭಾಗದಲ್ಲಿ ಆಯ್ಕೆ ಆಗಿರುತ್ತಾರೆ. ಆಗಸ್ಟ್ 15 ರಿಂದ ಅ.18 ರ ವರೆಗೆ ಹರಿಯಾಣದ ರೊಹಟಕ್‌ನಲ್ಲಿ ನಡೆಯುವ ರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.