ಹೊನ್ನಾವರ: ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರ ಮಾಲಿನ್ಯ ಇನ್ನಷ್ಟು ಹೆಚ್ಚಿದ್ದು ಜನರು ಕ್ಯಾನ್ಸರ್ ಮೊದಲಾದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೀಶ ಸಿ.ಕೆ.ಅಭಿಪ್ರಾಯಪಟ್ಟರು.

ಲಯನ್ಸ್ ಕ್ಲಬ್ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಆಶ್ರಯದಲ್ಲಿ ಕಾಸರಕೋಡಿನಲ್ಲಿರುವ ಅರಣ್ಯ ಇಲಾಖೆಯ ಸಸ್ಯಪಾಲನಾಲಯದಲ್ಲಿ ಶನಿವಾರ ನಡೆದ ಬೀಜದುಂಡೆ ತಯಾರಿಕೆ ಮತ್ತು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

’ಪರಿಸರ ಸಮತೋಲನ ಕಾಯುವಲ್ಲಿ ಕಾಡಿನ ಪಾತ್ರ ಮಹತ್ವದ್ದಾಗಿದ್ದು ಸಾರ್ವಜನಿಕ ವಲಯದಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ಕೆ ಪ್ರೋತ್ಸಾಹ ಅಗತ್ಯ.ಗೊಬ್ಬರ ಮಿಶ್ರಿತ ಮಣ್ಣಿನಲ್ಲಿ ಬೀಜಗಳನ್ನಿಟ್ಟು ಬೀಜದುಂಡೆಗಳನ್ನು ತಯಾರಿಸಲಾಗುತ್ತದೆ;ಬೀಜಪ್ರಸರಣದ ಮೂಲಕ ಸ್ವಾಭಾವಿಕವಾಗಿ ಗಿಡಗಳು ಬೆಳೆಯುವಂತೆ ಮಾಡುವುದು ಇದರಿಂದ ಸಾಧ್ಯವಾಗುತ್ತದೆ' ಎಂದು ಅವರು ಹೇಳಿದರು.

ಲಯನ್ ಎಂ.ಜೆ.ಎಫ್. ರವೀಂದ್ರ ನಾಯ್ಕ ಪರಿಸರ ಸ್ನೇಹಿ ಚೀಲಗಳನ್ನು ವಿತರಿಸಿದರು. ಲಯನ್ಸ್ ವಿವಿಧ ಪದಾಧಿಕಾರಿಗಳಾದ ರವಿ ಹೆಗಡೆ, ಗಣಪತಿ ನಾಯಕ, ಗಿರೀಶ ಕುಚಿನಾಡ್, ಐಶ್ವರ್ಯ ಮಾಸೂರಕರ್, ರಾಜೇಶ ಸಾಳೆಹಿತ್ತಲ್, ಮಂಜುಳಾ ಕುಚಿನಾಡ್, ಗಿರೀಶ ಶೇಟ್, ಆರ್.ಎಚ್.ನಾಯ್ಕ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-20-1306065786

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.