ಹೊನ್ನಾವರ: ‘ಕಡತೋಕಾ ಮಂಜುನಾಥ ಭಾಗವತ, ಉಪ್ಪೂರು ನಾರ್ಣಪ್ಪ ಭಾಗವತರಂಥ ಶ್ರೇಷ್ಠ ಯಕ್ಷಗಾನ ಭಾಗವತರ ಸಾಲಿನಲ್ಲಿ ಕಪ್ಪೆಕೆರೆ ಸುಬ್ರಾಯ ಭಾಗವತರು ಗುರುತಿಸಿಕೊಳ್ಳುತ್ತಾರೆ. ಅವರು ಹಿಮ್ಮೇಳದ ಭಾಗವತರಾಗಿ ಮುಮ್ಮೇಳದ ಕಲಾವಿದರ ಯಶಸ್ಸಿನಲ್ಲಿ ಧನ್ಯತೆ ಕಂಡ ನೈಜ ಯಕ್ಷಗಾನ ಭಾಗವತ’

ಇದು ಯಕ್ಷಗಾನ ತಾಳಮದ್ದಲೆ ಅರ್ಥಧಾರಿ ನಾರಾಯಣ ಯಾಜಿ ಸಾಲೆಬೈಲು ಅವರ ಮಾತು. ಬಹುತೇಕ ಯಕ್ಷಗಾನ ಕಲಾವಿದರ ಅಭಿಪ್ರಾಯವೂ ಹೌದು.

ಯಕ್ಷಗಾನ ಬಡಗುತಿಟ್ಟಿನ ಭಾಗವತರಾಗಿ ಛಾಪು ಮೂಡಿಸಿದ್ದ ತಾಲ್ಲೂಕಿನ ಹಡಿನಬಾಳ ಸಮೀಪದ ಕಪ್ಪೆಕೆರೆ ನಿವಾಸಿ ಸುಬ್ರಾಯ ಈಶ್ವರ ಹೆಗಡೆ ‘ಕಪ್ಪೆಕೆರೆ ಭಾಗವತರು’ ಎಂದು ಖ್ಯಾತರಾದವರು. ಯಕ್ಷಗಾನ ಪೌರಾಣಿಕ ಪ್ರಸಂಗಗಳ ಅಗಾಧ ಜ್ಞಾನ ಹಾಗೂ ರಂಗತಂತ್ರದ ನೈಪುಣ್ಯತೆಯೊಂದಿಗೆ ಅವರು ಯಕ್ಷಗಾನದ ಮುಮ್ಮೇಳದ ಹಲವು ಕಲಾವಿದರ ಹಿಂದಿನ ಶಕ್ತಿಯಾಗಿದ್ದರು.

ಕೃಷಿಕ ಕುಟುಂಬದ ಹಿನ್ನೆಲೆಯ ಸುಬ್ರಾಯ ತನ್ನ ಅಜ್ಜ ಗಣಪತಿ ಹೆಗಡೆ ಗೋಪಿ ಅವರ ಪ್ರೇರಣೆಗೊಳಗಾಗಿ ಅವರಿಂದಲೇ ಯಕ್ಷಗಾನ ಭಾಗವತಿಕೆಯ ದೀಕ್ಷೆ ಪಡೆದರು. ಗುಂಡಬಾಳ, ಇಡಗುಂಜಿ, ಅಮೃತೇಶ್ವರಿ, ಸಾಲಿಗ್ರಾಮ ಸೇರಿದಂತೆ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಹಲವು ಬಯಲಾಟ ಹಾಗೂ ವೃತ್ತಿಪರ ಮೇಳಗಳಲ್ಲಿ ಪ್ರಮುಖ ಭಾಗವತರಾಗಿ ಕೆಲಸ ಮಾಡಿದರು. ಯಕ್ಷಗಾನ ತಾಳಮದ್ದಲೆ ಸೇವೆಯನ್ನು ನೀಡುತ್ತ ಬಂದಿರುವ ಹೊಸಾಕುಳಿಯ ಕಲಾವರ್ಧಕ ಸಂಘದ ಭಾಗವತರಾಗಿಯೂ ಸೇವೆ ಸಲ್ಲಿಸಿದ್ದರು.

ಖ್ಯಾತ ಯಕ್ಷಗಾನ ಕಲಾವಿದ ತೋಟಿಮನೆ ಗಣಪತಿ ಹೆಗಡೆ ಸೇರಿದಂತೆ ಹಲವು ಕಲಾವಿದರು ಇವರ ತಾಳದ ಲಯಕ್ಕೆ ಹೆಜ್ಜೆ ಹಾಕಿ ಪಳಗಿದ ಕಲಾವಿದರಾಗಿದ್ದಾರೆ. ಯಕ್ಷಪ್ರೇಮಿ ಅಭಿಮಾನಿಗಳಿಂದ ಇವರು ‘ಲಯ ಬ್ರಹ್ಮ’ ಎಂಬ ಅಭಿದಾನ ಕೂಡ ಪಡೆದಿದ್ದರು. ಕಾಲಕ್ರಮೇಣ ಧ್ವನಿ ಕೈಕೊಟ್ಟಿತಾದರೂ ಅವರಲ್ಲಿದ್ದ ಲಯ ಸಿದ್ಧಿ ಹಾಗೂ ಕಲಾವಿದರನ್ನು ಕುಣಿಸುವ ಚಾಕಚಕ್ಯತೆಯ ಕಾರಣ ಕೊನೆಯವರೆಗೂ ಕಲಾವಿದರ ಬೇಡಿಕೆಯ ಭಾಗವತರಾಗಿ ಉಳಿದಿದ್ದರು. ವಿವಿಧ ಸಂಗೀತ ಪ್ರಕಾರಗಳನ್ನೊಳಗೊಂಡ ‘ಹಾಸ್ಯ ಲಾಸ್ಯ’ ಎಂಬ ವಿನೂತನ ಕಲಾ ಪ್ರಯೋಗದಲ್ಲಿಯೂ ಅವರ ತಾಳ ವಾದನ ಸೈ ಎನಿಸಿಕೊಂಡಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-22-2080187340

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.