ಹೊನ್ನಾವರ: ‘ಪ್ರವಾಹದಿಂದ ಕೊಚ್ಚಿ ಹೋದ ಮನೆ ಕಟ್ಟಿಕೊಡುವಂತೆ ದಶಕದಿಂದ ಕಚೇರಿಗಳಿಗೆ ಅಲೆದಾಡುತ್ತಿದ್ದೇವೆ. ಊರಿಗೆ ಬಂದ ಜನಪ್ರತಿನಿಧಿಗಳು ಮಾತಿನಲ್ಲಷ್ಟೆ ಮನೆ ಕಟ್ಟಿದ್ದಾರೆಯೇ ಹೊರತು, ಇದುವರೆಗೂ ಸ್ಪಂದನೆ ಸಿಕ್ಕಿಲ್ಲ’ ಹೀಗೆಂದು ಆಡಳಿತ ವ್ಯವಸ್ಥೆ ವಿರುದ್ಧ ಗುಂಡಬಾಳ ನದಿ ತೀರದಲ್ಲಿನ ನೆರೆ ಸಂತ್ರಸ್ತರು ಆಕ್ರೋಶ ಹೊರಹಾಕುತ್ತಾರೆ.

ಬೇಸಿಗೆಯಲ್ಲಿ ಒಣಗಿದರೂ ಮಳೆಗಾಲದಲ್ಲಿ ಗುಂಡಬಾಳ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗುವುದು ಸಾಮಾನ್ಯ. ರಾತ್ರೋರಾತ್ರಿ ಮನೆಗಳನ್ನು ತೊರೆದು ಕಾಳಜಿ ಕೇಂದ್ರ ಸೇರಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಿಸುವ ನದಿಯಂಚಿನ ಜನರು ತಮಗೆ ಎತ್ತರದ ಜಾಗದಲ್ಲಿ ಮನೆ ನಿವೇಶನ ಕೊಡಿಸಬೇಕು ಎಂದು ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದಾರೆ.

ಗುಂಡಬಾಳ ನದಿಯಂಚಿನಲ್ಲಿರುವ ಚಿಕ್ಕನಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳೆಬದಿಕೇರಿಯಲ್ಲಿರುವ 10-15 ಕುಟುಂಬಗಳು ನೆರೆಯಿಂದ ಹೆಚ್ಚಿನ ಸಂಕಷ್ಟಕ್ಕೊಳಗಾಗಿವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವಗ್ರಾಮ ಸಮೀಪ ಹಾಗೂ ಜನಕಡ್ಕಲ್ ಗ್ರಾಮದ ಸ.ನಂ.23 ಅ ಮತ್ತು 24 ಅ ದಲ್ಲಿ ಇರುವ ಕಂದಾಯ ಭೂಮಿಯನ್ನು ಪ್ರಸ್ತುತ ನೆರೆ ಸಂತ್ರಸ್ತರಿಗೆ ವಿತರಣೆ ಮಾಡುವ ಪ್ರಸ್ತಾವ ನನೆಗುದಿಗೆ ಬಿದ್ದಿದೆ.

‘ಒಂದೇ ಮಳೆಗಾಲದಲ್ಲಿ ಐದಾರು ಬಾರಿ ಮನೆಬಿಟ್ಟು ಕಾಳಜಿ ಕೇಂದ್ರಗಳಿಗೆ ಹೋದ ಸಂದರ್ಭಗಳಿವೆ. ನಾವೆಲ್ಲಿಗೂ ಬರುವುದಿಲ್ಲ ಎಂದರೂ ಬಲವಂತದಿಂದ ಕಾಳಜಿ ಕೇಂದ್ರಗಳಿಗೆ ಸಾಗಿಸಲಾಗುತ್ತದೆ. ಮನೆ ನಿವೇಶನ ನೀಡಿ ಎಂದು ಸಚಿವರು, ಜಿಲ್ಲಾಧಿಕಾರಿ ಮತ್ತಿತರರಿಗೆ ಹಲವು ಲಿಖಿತ ಮನವಿ ಸಲ್ಲಿಸಿದರೂ ನಮ್ಮ ಗೋಳು ಕೇಳುವವರಿಲ್ಲ’ ಎಂದು ಗ್ರೇಸಿ ಫರ್ನಾಂಡಿಸ್ ಅಳಲು ತೋಡಿಕೊಂಡರು.

‘ನವಗ್ರಾಮದ ಸಮೀಪ ನೀಡಿದ್ದ ಮನೆ ನಿವೇಶನವನ್ನು ಸ್ಥಳೀಯ ಗ್ರಾಮ ಪಂಚಾಯಿತಿ ವಾಪಸ್ ಪಡೆದು ವಂಚಿಸಿದೆ’ ಎಂದು ನೆರೆಪೀಡಿತ ಈಶ್ವರ ಹಳ್ಳೇರ ಆಕ್ರೋಶ ವ್ಯಕ್ತಪಡಿಸಿದರು.

‘ಮನೆ ನಿರ್ಮಾಣಕ್ಕೆ ಸುರಕ್ಷಿತ ಜಾಗ ಒದಗಿಸಿಕೊಡಲು ಆಡಳಿತ ವ್ಯವಸ್ಥೆಗೆ ಸಾಧ್ಯವಾಗಿಲ್ಲ. ಇದರಿಂದ ಬೇಸತ್ತು ನವಗ್ರಾಮದ ಸಮೀಪ ಕಂದಾಯ ಜಾಗದಲ್ಲಿ 2 ವರ್ಷಗಳ ಹಿಂದೆ ಗುಡಿಸಲು ಕಟ್ಟಲು ಮುಂದಾದಾಗ ಅದನ್ನು ತಡೆದ ಗ್ರಾಮ ಪಂಚಾಯಿತಿ ಸದಸ್ಯರು ಮನೆ ನೀಡುವ ಭರವಸೆ ನೀಡಿದರು. ಆದರೆ ಇದುವರೆಗೂ ಅವರ ಭರವಸೆ ಈಡೇರಿಲ್ಲ’ ಎಂದು ಗ್ರಾಮಸ್ಥೆ ವನಿತಾ ಹಳ್ಳೇರ ಆರೋಪಿಸಿದರು.

ಸಂತ್ರಸ್ತರಿಗೆ ಸರ್ಕಾರದ ಭೂಮಿಯಲ್ಲಿ ಮನೆ ನಿವೇಶನ ನೀಡಲು ಮೂರನೆಯ ವ್ಯಕ್ತಿ ಆಕ್ಷೇಪಣೆ ಸಲ್ಲಿಸಿದರೆ ಅದನ್ನು ಪುರಸ್ಕರಿಸಲು ಸಾಧ್ಯವಿಲ್ಲ. ಸೂಕ್ತ ಕ್ರಮ ಜರುಗಿಸಲು ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗೆ ಸೂಚಿಸಲಾಗಿದೆ
ಪ್ರವೀಣ ಕರಾಂಡೆ, ತಹಶೀಲ್ದಾರ್

ಮುಗಿಯದ ಪತ್ರ ವ್ಯವಹಾರ

ಚಿಕ್ಕನಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆರೆ ಸಂತ್ರಸ್ತರಿಗೆ ಸೂಕ್ತ ನಿವೇಶನ ಒದಗಿಸಲು ಜಾಗ ಗುರುತಿಸುವಂತೆ ತಹಶೀಲ್ದಾರರ ಪತ್ರವನ್ನು ಆಧರಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಕಳೆದ ಫೆ.27ರಂದು ತಾಲ್ಲೂಕು ಪಂಚಾಯಿತಿ ಕಚೇರಿಯಿಂದ ಚಿಕ್ಕನಕೋಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮತ್ತೊಂದು ಪತ್ರ ರವಾನೆಯಾಗಿದೆ.

‘ಅನೇಕ ವರ್ಷಗಳಿಂದ ಈ ರೀತಿ ಪತ್ರ ವ್ಯವಹಾರ ನಡೆಸುತ್ತ ಕಾಲಹರಣ ನಡೆಸಲಾಗುತ್ತಿದೆ. ಜವಾಬ್ದಾರಿಯಿಂದ ನುಣುಚಿಕೊಳ್ಳಲು ಅಧಿಕಾರಿಗಳು ಇಂತಹ ತಂತ್ರ ಅನುಸರಿಸುತ್ತಿರುವ ಶಂಕೆ ಕಾಡುತ್ತಿದೆ’ ಎಂದು ನೆರೆ ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.