ಹೊನ್ನಾವರ: 'ಸ್ವಾರ್ಥಕ್ಕಿಂತ ಸೇವೆ ದೊಡ್ಡದು' ಎನ್ನುವ ಧ್ಯೇಯ ವಾಕ್ಯದೊಂದಿಗೆ ಜಗತ್ತಿನಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ರೋಟರಿ ಕ್ಲಬ್ನ ಲಕ್ಷಾಂತರ ಸದಸ್ಯರು ತಮ್ಮ ಸಾಮಾಜಿಕ ಸೇವೆಯ ಮೂಲಕ ಜೀವನದಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ' ಎಂದು ರೋಟರಿ ಕ್ಲಬ್ ಬೆಳಗಾವಿ ಇದರ ಹಿರಿಯ ಸದಸ್ಯ ಅಶೋಕ ನಾಯಕ ಹೇಳಿದರು.

ರೋಟರಿ ಕ್ಲಬ್ ಹೊನ್ನಾವರ ಇದರ ವತಿಯಿಂದ ನಡೆದ ‘ಚಾರ್ಟರ್ ನೈಟ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೋಟರಿ ಸಹಾಯಕ ಗವರ್ನರ್ ಮಹೇಶ ಕಲ್ಯಾಣಪುರ ಮಾತನಾಡಿದರು. ತಾಲ್ಲೂಕಿನ ವಿವಿಧ ಶಾಲೆಗಳ ಹಿರಿಯ ಶಿಕ್ಷಕರಾದ ಸುಬ್ರಾಯ ಎಂ.ಭಟ್, ಸಲ್ವದರ್ ಲೋಪಿಸ್, ಈಶ್ವರ ವಿ.ಶಾಸ್ತ್ರಿ, ಕೆ.ಪಿ.ವಿನಯ್, ಆನಂದ ನಾಯಕ ಹಾಗೂ ಸಾಮಾಜಿಕ ಸೇವೆಗಾಗಿ ರೋಟರಿ ಸದಸ್ಯರಾದ ರಾಘವೇಂದ್ರ ಪ್ರಭು ಮತ್ತು ಡಾ.ರಂಗನಾಥ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

21 ರೋಟರಿ ಸದಸ್ಯರಿಗೆ ಪಿ.ಎಚ್.ಎಫ್.ಪ್ರಶಸ್ತಿ ಪ್ರದಾನ ನಡೆಯಿತು.ನಾರಾಯಣ ಯಾಜಿ ಸಂಪಾದಕತ್ವದ ‘ರೋಟಾವರ್‘ ಬಿಡುಗಡೆಗೊಂಡಿತು.

ರೋಟರಿ ಅಧ್ಯಕ್ಷ ರಾಜು ಮಾಳಗಿಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಹೆನ್ರಿ ಲೀಮಾ, ಖಜಾಂಚಿ ಸೋಹನ್ ಹೊರ್ಟ, ಸೂರ್ಯಕಾಂತ ಸಾರಂಗ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-20-240031291

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.