ಹೊನ್ನಾವರ: ‘ಪಂಚಕ್ಷೇತ್ರಗಳಲ್ಲೊಂದು ಎಂದು ಪುರಾಣ ಪ್ರಸಿದ್ಧಿ ಇರುವ ಗೋವರ್ಧನ ಸೀಮಾ ದೇವ ಗುಣವಂತೆಯ ಶ್ರೀ ಶಂಭುಲಿಂಗೇಶ್ವರ ನೂತನ ಶಿಲಾಮಯ ದೇವಸ್ಥಾನದ ಲೋಕಾರ್ಪಣೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಏ.11ರಿಂದ 18ರ ವರೆಗೆ ನಡೆಯಲಿದೆ’ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ನರಸಿಂಹ ಪಂಡಿತ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು, ‘ಆರ್.ಎನ್. ಶೆಟ್ಟಿ ಅವರ ಪುತ್ರ ಸುನೀಲ್ ಶೆಟ್ಟಿ ನೂತನ ಶಿಲಾಮಯ ದೇವಸ್ಥಾನ ನಿರ್ಮಿಸಿಕೊಟ್ಟಿದ್ದಾರೆ’ ಎಂದರು.

‘11ರಂದು ಶಿಖರ ಕಲಶ ಸಂಸ್ಕಾರ, ಮೃತ್ತಿಕಾಹರಣ, ಹೈಕೋರ್ಟ್ ನ್ಯಾಯಮೂರ್ತಿ ಎಸ್.ಜಿ. ಪಂಡಿತ, ವಾಸ್ತು ತಜ್ಞ ಮಹೇಶ ಮುನಿಯಂಗಳ ಪಾಲ್ಗೊಳ್ಳುವಿಕೆಯಲ್ಲಿ ವೇದಿಕೆ ಕಾರ್ಯಕ್ರಮ, ದೀಕ್ಷಾ ರಾಮಕೃಷ್ಣ ಅವರಿಂದ ನೃತ್ಯ, ನಾಗವೇಣಿ ಹೆಗಡೆ, ಶಿವಾನಂದ ಭಟ್ಟ, ಸುಹಾಸಿನಿ ಹೆಗಡೆ ಅವರಿಂದ ಗಾಯನ, ರಮೇಶ ಮೇಸ್ತ ತಂಡದಿಂದ ತಾಂಡವ ನೃತ್ಯ, 12ರಂದು ಶ್ರೀಮನ್ನೆಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮೀಜಿ ಅವರಿಂದ ದೇವರ ಪ್ರತಿಷ್ಠೆ ಹಾಗೂ ದೇವಸ್ಥಾನ ಲೋಕಾರ್ಪಣೆ, ಸಂಜೆ 7ಕ್ಕೆ ಪಂ. ವೆಂಕಟೇಶಕುಮಾರ ಅವರಿಂದ ಗಾಯನ ನಡೆಯಲಿವೆ’ ಎಂದರು.

‘13ರಂದು ಸಂಜೆ 7ಕ್ಕೆ ಪುತ್ತೂರು ನರಸಿಂಹ ನಾಯಕ ಅವರಿಂದ ಗಾಯನ, 14ರಂದು ಮಧ್ಯಾಹ್ನ 12ಕ್ಕೆ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಅವರಿಂದ ಆಶೀರ್ವಚನ, ಸಂಜೆ 7ಕ್ಕೆ ಪರಮೇಶ್ವರ ಹೆಗಡೆ ಅವರಿಂದ ಗಾಯನ, 15ರಂದು ಸಂಜೆ 6ಕ್ಕೆ ಗಜಯಂತ್ರೋತ್ಸವ, 16ರಂದು ಸಂಜೆ 7ಕ್ಕೆ ಶೃತಿ ಬೋಡೆ ಹಾಗೂ ಬಿ.ಕೃಷ್ಣ ಭಟ್ ಅವರಿಂದ ಗಾಯನ, 17ರಂದು ಸಂಜೆ 5ಕ್ಕೆ ಮಾರುತಿ ಗುರೂಜಿ ಅವರಿಂದ ಆಶೀರ್ವಚನ, ಸಂಜೆ 7ಕ್ಕೆ ಸಂಗೀತಾ ಕಟ್ಟಿ ಅವರಿಂದ ಗಾಯನ, ಮನು ಹಂದಾಡಿ ಅವರಿಂದ ಹಾಸ್ಯ, 18ರಂದು ಬ್ರಹ್ಮ ರಥೋತ್ಸವ ಹಾಗೂ ರಾತ್ರಿ 9ಕ್ಕೆ ಯಕ್ಷಗಾನ ನಡೆಯಲಿವೆ’ ಎಂದು ಅವರು ತಿಳಿಸಿದರು.

ದೇವಸ್ಥಾನ ಸಮಿತಿಯ ಮಂಜುನಾಥ ಹೆಗಡೆ, ಶಿವಾನಂದ ಗೌಡ, ಎಂ.ಎಸ್.ಹೆಗಡೆ, ಗೋವಿಂದ ಗೌಡ, ಎಂ.ಆರ್.ಹೆಗಡೆ ಹಾಗೂ ಶಿವಾನಂದ ನಾಯ್ಕ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-20-652337523

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.